ಚೌಡೇಶ್ವರಿದೇವಿ ಜಾತ್ರಾ ಮಹೋತ್ಸವ

20bdvt2
Published on

ಭದ್ರಾವತಿ: ತಾಲೂಕಿನ ಹೊಸಸಿದ್ದಾಪುರ ಶ್ರೀ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ ಜ.21ರಿಂದ 23ರವರೆಗೆ ಅದ್ದೂರಿಯಾಗಿ ನಡೆಯಲಿದೆ.

21ರಂದು ಬೆಳಗ್ಗೆ 8ಕ್ಕೆ ಗಂಗಾಪೂಜೆಯೊಂದಿಗೆ ಪೂಜಾ ಕಾರ್ಯಕ್ರಮ ಆರಂಭವಾಗಲಿದೆ. ಶ್ರೀ ಗಣಪತಿ ನವಗ್ರಹ ಹೋಮ, ಮೃತ್ಯುಂಜಯ ಹೋಮ ಹಾಗೂ ದುರ್ಗಾ ಹೋಮ, ಮಹಾಮಂಗಳಾರತಿ, ಅನ್ನಸಂತರ್ಪಣೆ ನಡೆಯಲಿದೆ. ಶಾಸಕ ಬಿ.ಕೆ.ಸಂಗಮೇಶ್ವರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಕುಮಾರ್, ನಗರಸಭೆ ಸದಸ್ಯೆ ನಾಗರತ್ನಾ ಅನಿಲ್‌ಕುಮಾರ್ ಭಾಗವಹಿಸಲಿದ್ದಾರೆ. 22ರಂದು ಅಮ್ಮನಿಗೆ ಮಡಿಲಕ್ಕಿ ಪೂಜೆ, ಸಂಜೆ 5ಕ್ಕೆ ಗ್ರಾಮದಲ್ಲಿ ದೇವಿಯ ಮೆರವಣಿಗೆ ವಿವಿಧ ವಾದ್ಯ, ಕಲಾಮೇಳದೊಂದಿಗೆ ನಡೆಯಲಿದೆ. 23ರಂದು ದೇವಿಗೆ ತಂಬಿಟ್ಟಿನ ಆರತಿ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಬೆಳಗ್ಗೆ 6ರಿಂದ ಆರಂಭಗೊಳ್ಳಲಿವೆ. ಮುಖ್ಯಅತಿಥಿಯಾಗಿ ಜೆಡಿಎಸ್‌ನ ಶಾರದಾ ಅಪ್ಪಾಜಿ, ಬಿಜೆಪಿಯ ಮಂಗೋಟೆ ರುದ್ರೇಶ್ ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀ ಚೌಡೇಶ್ವರಿ ದೇವಿ ಚಾರಿಟಬಲ್ ಟ್ರಸ್ಟ್ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net