ಚೌಡೇಶ್ವರಿ ದೇವಿ ದೇಗುಲಕ್ಕೆ 10 ಲಕ್ಷ ರೂ.

CTD 24 CHDESHVARI DEVI-04
Published on

ಚಿತ್ರದುರ್ಗ: ನಗರದ ದೊಡ್ಡಪೇಟೆ ಜವಳೇರ ಬೀದಿ ಚೌಡೇಶ್ವರಿ ದೇವಿ ದೇವಾಲಯದ ಅಭಿವೃದ್ಧಿಗೆ 10 ಲಕ್ಷ ರೂ. ಅನುದಾನ ಕೊಡುವುದಾಗಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಭರವಸೆ ನೀಡಿದರು.

ಚೌಡೇಶ್ವರಿ ದೇವಿ ಸೇವಾ ಸಮಿತಿ ಶುಕ್ರವಾರ ರಾತ್ರಿ ಏರ್ಪಡಿಸಿದ್ದ ಕಡೇ ಕಾರ್ತಿಕ ಮಹೋತ್ಸವ, ದೀಪರಾಧನೆಯಲ್ಲಿ ದೇವಿಗೆ ಪೂಜೆ ಸಲ್ಲಿಸಿ ಮಾತನಾಡಿದರು.

ಈ ದೇವಾಲಯದ ಅಭಿವೃದ್ಧಿಗೆ ಈಗ ಧನ ಸಹಾಯ ಕೇಳುತ್ತಿದ್ದೀರಿ. ಪ್ರಸ್ತುತ ಶಾಸಕರ ನಿಧಿಯಿಂದ ಅನುದಾನ ಭರಿಸಲು ಸಾಧ್ಯವಿಲ್ಲ. ಈಗಾಗಲೇ 4 ಕೋಟಿ ರೂ. ಅನುದಾನವನ್ನು ಕ್ಷೇತ್ರ ವ್ಯಾಪ್ತಿಯ ವಿವಿಧ ದೇಗುಲಗಳ ಅಭಿವೃದ್ಧಿಗೆ ಕೊಟ್ಟಿದ್ದೇನೆ. ಶಾಸಕನಾಗಿ ಮರು ಆಯ್ಕೆಯಾದರೆ ಖಂಡಿತ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ನಗರದಲ್ಲಿ ಸಿಮೆಂಟ್ ರಸ್ತೆ ನಿರ್ಮಿಸಲಾಗಿದ್ದು, ಡಿವೈಡರ್‌ನಲ್ಲಿ 28 ಸಾವಿರ ಗಿಡಗಳನ್ನು ಬೆಳೆಸಲಾಗುವುದು. ಚಿತ್ರದುರ್ಗವನ್ನು ಸುಂದರ ನಗರವನ್ನಾಗಿ ಮಾಡಲಾಗುವುದು ಎಂದರು.

ಸಮಿತಿ ಅಧ್ಯಕ್ಷ ರಾಘವೇಂದ್ರ, ನಾಗಣ್ಣ, ವಿರೂಪಾಕ್ಷಪ್ಪ, ಬಸವರಾಜು, ಶಂಕರ್, ಗಣೇಶ್ ಯೋಗೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net