ಇಂದಿನಿಂದ ಚೌಡೇಶ್ವರಿ ಜಾತ್ರೋತ್ಸವ

Chaudeshwar fair from today
ಚೌಡೇಶ್ವರಿದೇವಿ
Published on

ಇಂಡಿ: ಪಟ್ಟಣದ ಕುಂಬಾರ ಓಣಿಯಲ್ಲಿ ಜೂ.5 ರಿಂದ 9ರವರೆಗೆ ಚೌಡೇಶ್ವರಿ ದೇವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ ಎಂದು ಜಾತ್ರಾ ಕಮಿಟಿ ತಿಳಿಸಿದೆ.

ಜೂ.5 ರಂದು ರಾತ್ರಿ 12 ಗಂಟೆಗೆ ಚೌಡೇಶ್ವರಿ ದೇವಿಯ ಬಾಳ ಬಟ್ಟಿಲು ಮೆರವಣಿಗೆ ಊರು ಸುತ್ತಿ ಪ್ರದಣೆ ಹಾಕುವ ಕಾರ್ಯ ನಡೆಯಲಿದೆ. ಜೂ.6 ರಂದು ಬೆಳಗ್ಗೆ 9 ಗಂಟೆಗೆ ಚೌಡೇಶ್ವರಿ ದೇವಸ್ಥಾನದಿಂದ ಮೆರವಣಿಗೆ ಹೊರಟು ಬಜಾರ್​ದಲ್ಲಿ ಮಜ್ಜಿಗೆ ಮಾಡಿ, ಅಕ್ಕಿ ಆಯುವ ಕಾರ್ಯ ನಡೆಯಲಿದೆ. ನಂತರ ಊರ ಗೌಡರ (ದಾದಾಗೌಡರ) ಮನೆಗೆ ಹೋಗಿ ನಂತರ ನಗರದ ಭಕ್ತರ ಮನೆಗೆ ಹೋಗಿ ಉಡಿ ತುಂಬಿಕೊಂಡು ಹರಕೆಗಳನ್ನು ಹೇಳುವ ಕಾರ್ಯ ನಡೆಯಲಿದೆ. ಶುಭ ಹಾರೈಸಿ ಅಂದು ರಾತ್ರಿ 8 ಗಂಟೆಗೆ ದೇವಸ್ಥಾನಕ್ಕೆ ಮೆರವಣಿಗೆ ಆಗಮಿಸಲಿದೆ.

ಜೂ.7 ರಂದು ಮಧ್ಯಾಹ್ನ 1 ಗಂಟೆಗೆ ದೇವಸ್ಥಾನದಿಂದ ಹೊರಟು, ಕುಂಬಾರ ಓಣಿಯ ದೇವಿಯ ಗುಡಿಯ ಮುಂದೆ, ಬಡಿಗೇರ ಓಣಿಯಲ್ಲಿ, ಶಾಂತೇಶ್ವರ ದೇವಸ್ಥಾನದ ಮುಂದುಗಡೆ, ಬಜಾರ್​ದಲ್ಲಿ, ಚವಡಿ, ಗಣೇಶ ನಗರ, ಹುಸೇನ ಭಾಷಾ ದರ್ಗಾ ಮುಂದುಗಡೆ ಭಕ್ತರ ಜೊತೆ ಕೋಲಾಟ ನಡೆಯಲಿದೆ. ಸಂಜೆ 7 ಗಂಟೆಗೆ ಗಂಗೆ ಸೀತಾಳ ಮುಗಿಸಿಕೊಂಡು ದೇವಸ್ಥಾನಕ್ಕೆ ಆಗಮಿಸಲಾಗುವುದು.

ಜೂ.8 ರಂದು ರಾತ್ರಿ 9 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಗೋಪಾಲ ಹೂಗಾರ, ಗೋಪಾಲ ಇಂಚಗೇರಿ ಕಲಾ ಸಿಂಚನ ತಂಡದಿಂದ ಹಾಸ್ಯ ಮತ್ತು ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಜೂ.9 ರಂದು ದೇವಿಯ ಮೂರ್ತಿಯ ದಂಡಿ ಇಳಿಸುವ ಕಾರ್ಯಕ್ರಮದ ಜೊತೆಗೆ ಪ್ರಸಾದ ವಿತರಣಾ ಸೇವೆ ನಡೆಯಲಿದೆ ಎಂದು ಜಾತ್ರಾ ಕಮಿಟಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net