

ಕುಶಾಲನಗರ: ಹಾರಂಗಿ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಮಹಾಮಂಡಲದ ನೂತನ ಅಧ್ಯಕ್ಷರಾಗಿ ಎಸ್.ಸಿ.ಚೌಡೇಗೌಡ ಶನಿವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕುಶಾಲನಗರದ ಸಂಘದ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಒಂದೊಂದು ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಅಧ್ಯಕ್ಷ ಸ್ಧಾನಕ್ಕೆ ಎಸ್.ಸಿ.ಚೌಡೇಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಹುಣಸೂರು ತಾಲೂಕು ಹನಗೋಡು ಗ್ರಾಮದ ಎಚ್.ಎನ್.ಮಂಜುನಾಥ್ ನಾಮಪತ್ರ ಸಲ್ಲಿಸಿದರು.
ಚುನಾವಣಾಧಿಕಾರಿಯಾಗಿದ್ದ ತಹಸಿಲ್ದಾರ್ ಕಿರಣ್ ಗೋರಯ್ಯ ಅವಿರೋಧ ಆಯ್ಕೆ ಘೋಷಣೆ ಮಾಡಿದರು. ಸಂಘದ ಕಾರ್ಯದರ್ಶಿ ಮಹೇಶ್, ನಿರ್ದೇಶಕರಾದ ಮಹದೇವ, ಕಿರಣ್‌ಕುಮಾರ್, ಎಚ್.ಟಿ.ದಿನೇಶ್, ದೇವರಾಜ್, ರಮೇಶ್, ಕೇಶವೇಗೌಡ, ಅಶೋಕ್, ಶಿವಣ್ಣ, ಲೋಕೇಶ್, ತಿಮ್ಮೆಗೌಡ, ಹರೀಶ್, ಯತೀಶ್ ಸೇರಿದಂತೆ ಪಿರಿಯಾಪಟ್ಟಣ, ಹುಣಸೂರು, ಅರಕಲಗೂಡು, ಕೊಡಗು ಜಿಲ್ಲೆಯ 13 ನಿರ್ದೇಶಕರು ಸೇರಿದಂತೆ ಹಾಗೂ ಹಾರಂಗಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ನೀರು ಬಳಕೆದಾರರ ಸಂಘಗಳ ಕಾರ್ಯದರ್ಶಿಗಳು, ಸದಸ್ಯರು ಹಾಜರಿದ್ದರು.