ಗುರುವಿನ ಅನುಗ್ರಹದಿಂದ ಜೀವನ ಪಾವನ : ಕೆ.ಕೆ.ಶೆಟ್ಟಿ ಅನಿಸಿಕೆ

edaneer
ಶ್ರೀ ಎಡನೀರು ಮಠದಲ್ಲಿ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸಭಾ ಕಾರ್ಯಕ್ರಮದಲ್ಲಿ ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು.
Published on

ಬದಿಯಡ್ಕ: ಗುರುವಿನ ಅನುಗ್ರಹವಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿದೆ. ನಮ್ಮ ಜೀವನದುದ್ದಕ್ಕೂ ಉತ್ತಮ ಕಾರ್ಯಗಳನ್ನು ನಿರ್ವಹಿಸುತ್ತಾ ಮುಂದುವರಿದಾಗ ದೇವತಾನುಗ್ರಹವಾಗುತ್ತದೆ ಎಂದು ಮುಂಡಪಳ್ಳ ಶ್ರೀ ರಾಜರಾಜೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರ ಕೆ.ಕೆ.ಶೆಟ್ಟಿ ಹೇಳಿದರು.

ಜಗದ್ಗುರು ಶಂಕರಾಚಾರ್ಯ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಚತುರ್ಥ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಭಾನುವಾರ ನೆರವೇರಿಸಿ ಮಾತನಾಡಿದರು.

ಉದುಮ ಶಾಸಕ ಸಿ.ಎಚ್.ಕುಞಂಬು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಹಿಂದು ಧರ್ಮದಲ್ಲಿ ಯಾರೂ ಜಾತಿಯ ಪ್ರಶ್ನೆ ಎತ್ತುವುದಿಲ್ಲ. ಆದರೆ ಸರ್ಕಾರವೇ ಜಾತಿ ಬೇಧವನ್ನು ಸೃಷ್ಟಿಸುತ್ತದೆ. ಯಾವುದೇ ದಾಖಲೆಗೆ ಯಾ ಜಾತಿ ಎಂಬ ಕಾಲಂ ಇರುತ್ತದೆ. ಎಲ್ಲ ಸ್ತರದ ಜನರೂ ಎಡನೀರು ಮಠದಲ್ಲಿ ತಮ್ಮ ಸೇವೆಯನ್ನು ನಿರಂತರ ಕೈಗೊಳ್ಳುತ್ತಿರುವುದು ಹೆಮ್ಮೆಯ ವಿಚಾರ ಎಂದರು. ಕಲೆ, ಕಲಾಸೇವೆಯು ದೇವತಾಸೇವೆ ಎಂದರು.

ಪ್ರಸಿದ್ಧ ಯಕ್ಷಗಾನ ಭಾಗವತ ಸತ್ಯನಾರಾಯಣ ಪುಣಿಂಚಿತ್ತಾಯ ಪ್ರಾರ್ಥನೆ ಹಾಡಿದರು. ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ನಿರೂಪಿಸಿದರು. ವಕೀಲ ಎಂ.ನಾರಾಯಣ ಭಟ್ ಸ್ವಾಗತಿಸಿ, ಚಾತುರ್ಮಾಸ್ಯ ಸಮಿತಿಯ ಉಪಾಧ್ಯಕ್ಷ ಡಾ.ಭಾಸ್ಕರ್ ಭಾರ್ಯ ಪುತ್ತೂರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net