ನಾಳೆ ಎಡನೀರುಶ್ರೀ ಚಾತುರ್ಮಾಸ್ಯ ಮಂಗಲೋತ್ಸವ : ಕನ್ಯಾಡಿಶ್ರೀಗಳಿಂದ ಆಶೀರ್ವಚನ

edaneer
Published on

ಕಾಸರಗೋಡು: ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ನಾಲ್ಕನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಮಂಗಲೋತ್ಸವ ಸಮಾರಂಭ ಸೆ.18ರಂದು ಶ್ರೀಮಠದಲ್ಲಿ ಜರುಗಲಿದೆ.

ಬೆಳಗ್ಗೆ 6.30ಕ್ಕೆ ಪ್ರಾತಃಕಾಲದ ಪೂಜೆ, 8.30ಕ್ಕೆ ಮೃತ್ತಿಕಾ ವಿಸರ್ಜನೆ, ಸೀಮೋಲ್ಲಂಘನ, 9ಕ್ಕೆ ಭಜನೆ, 11ಕ್ಕೆ 60 ದಿವಸಗಳ ಅಖಂಡ ಭಜನಾ ಸಂಕೀರ್ತನೆ ಸಮಾರೋಪ ನಡೆಯುವುದು. ಬೆಳ್ತಂಗಡಿ ಕನ್ಯಾಡಿ ಶ್ರೀರಾಮ ಕ್ಷೇತ್ರದ ಸದ್ಗುರು ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. 11.45ಕ್ಕೆ ಪೂರಕ್ಕಳಿ, ಮಧಾಹ್ನ 12ಕ್ಕೆ ಅಷ್ಟೋತ್ತರ ಶತ ನಾಳಿಕೇರ ಯಾಗದ ಪೂರ್ಣಾಹುತಿ ನಡೆಯುವುದು. 2 ಗಂಟೆಗೆ ಮಂತ್ರಾಕ್ಷತೆ, 2.30ಕ್ಕೆ ಸಮಾರೋಪ ಸಮಾರಂಭ ನಡೆಯುವುದು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅಧ್ಯಕ್ಷತೆ ವಹಿಸುವರು. ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ಟಿ.ಶ್ಯಾಮ ಭಟ್ ಗೌರವ ಉಪಸ್ಥಿತರಿರುವರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು.

ಸಂಜೆ 4ರಿಂದ ಇಂದಿರಾ ಶರ್ಮ ಬೆಂಗಳೂರು ಹಾಗೂ ಮೇಧಾ ಮಂಜುನಾಥ್ ಬೆಂಗಳೂರು ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯುವುದು. ಸಂಜೆ 7ರಿಂದ ಅಭಿಷೇಕ್ ರಾಜು ಚೆನ್ನೈ ಬಳಗದವರಿಂದ ಭಕ್ತಿಗಾನ ಸಂಧ್ಯಾ ನಡೆಯುವುದು. ಜುಲೈ 21ರಂದು ಚಾತುರ್ಮಾಸ್ಯ ಕಾರ್ಯಕ್ರಮ ಆರಂಭಗೊಂಡಿದ್ದು, ನಿರಂತರ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳು ನಡೆದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net