ನಾಲ್ಕು ಮಾಸಗಳ ಕಾಲ ಆಚರಿಸುವುದೆ ಚಾತುರ್ಮಾಸ್ಯ

29kmt2_Pustaka
Published on

ಕುಮಟಾ: ಚಾತುರ್ಮಾಸ್ಯ ಎಂಬುದು ಒಂದು ವ್ರತ. ಆಷಾಢ ಶುಕ್ಲ ಪಕ್ಷದ ಏಕಾದಶಿಯಿಂದ ಕಾರ್ತಿಕ ಶುಕ್ಲ ಪಕ್ಷದ ದಶಮಿಯವರೆಗೆ ನಾಲ್ಕು ಮಾಸಗಳ ಕಾಲ ಆಚರಿಸುವ ಕಾರಣ ಈ ವ್ರತಕ್ಕೆ ಚಾತುರ್ವಸ್ಯವೆಂದು ಹೆಸರು. ಒಂದೊಂದು ತಿಂಗಳು ಒಂದೊಂದು ಬಗೆಯ ಆಹಾರವನ್ನು ವರ್ಜಿಸುವುದು ಈ ವ್ರತದ ಮಹತ್ವವಾಗಿದೆ ಎಂದು ‘ಚಾತುರ್ವಸ್ಯ ಒಂದು ನೆನಪು’ ಕೃತಿ ಸಂಪಾದಕ ಪಿ.ಆರ್. ನಾಯ್ಕ ಹೇಳಿದರು.

ಕೋನಳ್ಳಿಯಲ್ಲಿ ಚಾತುರ್ವಸ್ಯ ನಿರತ ಮಹಾಮಂಡಲೇಶ್ವರ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಗಳಿಂದ ಬಿಡುಗಡೆಗೊಂಡ ‘ಚಾತುರ್ವಸ್ಯ ಒಂದು ನೆನಪು’ ಕೃತಿಯ ಕುರಿತು ಅವರು ವಿವರಿಸಿದರು.

ಚಾತುರ್ವಸ್ಯ ವ್ರತಾಚರಣೆ ಪ್ರಥಮ ದಿನದ ಸೇವಾ ಕಾರ್ಯವನ್ನು ದೇವಗಿರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಮಧಾರಿಗಳಿಂದ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಹೊರೆ ಕಾಣಿಕೆ ಹೊತ್ತು ಎತ್ತಿನಗಾಡಿಯ ಜೊತೆಯಲ್ಲಿ ವಿವಿಧ ವೇಷ ತೊಟ್ಟ ಮಕ್ಕಳೊಂದಿಗೆ ಚಂಡೆ ನಾದದೊಂದಿಗೆ ವಿಶೇಷ ಉಡುಪು ಧರಿಸಿ ಹೊರೆ ಕಾಣಿಕೆ ಸಲ್ಲಿಸಲಾಗಿತ್ತು. ಇದೆಲ್ಲದರ ಸಚಿತ್ರ ವರದಿ ಹಾಗೂ ವಿವಿಧ ಲೇಖನಗಳನ್ನು ಕೃತಿ ಒಳಗೊಂಡಿದೆ ಎಂದರು.

ದೇವಗಿರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್.ಟಿ. ನಾಯ್ಕ ಮಾತನಾಡಿ, ಚಾತುರ್ವಸ್ಯ ನಡೆಯುವ ಪ್ರದೇಶದ ಜನರಲ್ಲಿ ಸುಭಿಕ್ಷೆಯನ್ನು ಉಂಟು ಮಾಡಿ ಸ್ವಾಮೀಜಿಗಳ ದರ್ಶನ ಸೇವೆ ಹಾಗೂ ಅಮೃತ ವಚನವನ್ನು ಸವಿಯುವ ಅವಕಾಶ ಎಲ್ಲ ಸಮಾಜದ ಜನರಿಗೂ ಲಭಿಸಿರುವುದು ಸಂತೋಷ ತಂದಿದೆ ಎಂದರು.

ಕೃತಿ ಬಿಡುಗಡೆ ಸಂದರ್ಭದಲ್ಲಿ ಚಾತುರ್ವಸ್ಯ ವ್ರತ ಆಚರಣೆ ಸಮನ್ವಯ ಸಮಿತಿ ಅಧ್ಯಕ್ಷ ಎಚ್. ಆರ್. ನಾಯ್ಕ, ತಾಲೂಕು ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ, ಕುಮಟಾ ನೌಕರರ ಸಂಘದ ಅಧ್ಯಕ್ಷ ಎನ್.ಆರ್. ನಾಯ್ಕ, ಹೊನ್ನಾವರ ನೌಕರರ ಸಂಘದ ಅಧ್ಯಕ್ಷ ಸುಧೀಶ ನಾಯ್ಕ, ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ, ಪ್ರೌಢಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಸತೀಶ ನಾಯ್ಕ ಬರ್ಗಿ, ಉಪನ್ಯಾಸಕ ಪ್ರಭಾಕರ ನಾಯ್ಕ, ಸೇವಾ ಸಮಿತಿ ಕಾರ್ಯದರ್ಶಿ ಸಚಿನ ನಾಯ್ಕ, ಪೂಜಾ ಸಮಿತಿ ಕಾರ್ಯದರ್ಶಿ ಮಹೇಶ ನಾಯ್ಕ, ಹರನೀರ ನಾಮಧಾರಿ ಸಂಘದ ಅಧ್ಯಕ್ಷ ಎಂ.ಡಿ. ನಾಯ್ಕ, ದೇವಗಿರಿ ಗ್ರಾ.ಪಂ. ಸದಸ್ಯ ನಾಗೇಶ ನಾಯ್ಕ, ವಕೀಲ ಕೆ.ಆರ್. ನಾಯ್ಕ, ಉದ್ಯಮಿ ಅಕ್ಷಯ ನಾಯ್ಕ, ಶಿಕ್ಷಕ ಸಂಘದ ಉಪಾಧ್ಯಕ್ಷ ಸುರೇಶ ನಾಯ್ಕ, ಜನಾರ್ದನ ಹರನೀರು, ಪ್ರಕಾಶ ನಾಯ್ಕ, ವಿ.ಜಿ. ನಾಯ್ಕ, ಕೃತಿ ಪ್ರಾಯೋಜಕರಾದ ರಮಾ ಮಹೇಶ ನಾಯ್ಕ, ಶಂಕರ ನಾಯ್ಕ, ರಾಜು ನಾಯ್ಕ, ಜೆ.ಕೆ. ನಾಯ್ಕ, ಬಾಬು ನಾಯ್ಕ, ನಾರಾಯಣ ನಾಯ್ಕ, ಜಿ.ಎಂ. ನಾಯ್ಕ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net