ಭಗವಂತನಿಗೆ ಪ್ರಿಯವಾದ ಕಾಲ ಚಾತುರ್ಮಾಸ್ಯ

raichur
raichur
Published on

ರಾಯಚೂರು ಭಗವಂತನಿಗೆ ಅತಿಪ್ರೀಯವಾದ ಕಾಲ ಚಾತುರ್ಮಾಸ್ಯ ಕಾಲ ಎಂದು ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ನುಡಿದರು.

ನಗರದ ಜವಾಹರ ನಗರದ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳವರ ಶಾಖಾ ಮಠದಲ್ಲಿ ಸೋಮವಾರ ಶ್ರೀಮಠದ ಶಿಷ್ಯರಿಗೆ ಹಾಗೂ ರಾಯರ ಭಕ್ತರಿಗೆ ತಪ್ತಮುದ್ರಾಧಾರಣೆ ನೀಡಿ ಅನುಗ್ರಹ ಸಂದೇಶ ನೀಡಿದರು. ಚಾತುರ್ಮಾಸ್ಯ ಕಾಲದಲ್ಲಿ ಭಗವಂತ ಪ್ರೀತಿಗೋಸ್ಕರವಾಗಿ ಅನೇಕ ವೃತಗಳು ಹಾಗೂ ನಿಯಮಗಳನ್ನು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಾವು ಭಗವಂತನ ಅನುಗ್ರಹ ಪಡೆಯಬೇಕಾದರೆ ಈ ಚಾತುರ್ಮಾಸ್ಯ ವೃತ ಆಚರಣೆ ಮಾಡುತ್ತಾ ಬರಲಾಗಿದೆ. ಭಗವಂತನಿಗೆ ಸೇವಾ ರೂಪವಾಗಿ ಈ ದೇಹವನ್ನು ಪವಿತ್ರ ಮಾಡಿಕೊಳ್ಳ ಸಲುವಾಗಿ ಈ ನಿಯಮಗಳನ್ನು ಅನುಕರಣೆ ಮಾಡಬೇಕೆಂದು ತಿಳಿಸಿದರು.

ಈ ದೇಹವು ಪವಿತ್ರವಾಗಬೇಕಾದರೆ ಭಗವಂತ ಆಯುಧಗಳಾದ ಶ್ರೀಚಕ್ರ ಹಾಗೂ ಶಂಖ ಮುದ್ರೆಗಳನ್ನು ಧಾರಣೆ ಮಾಡಬೇಕು. ಈ ಎರಡು ಮುದ್ರೆಗಳು ವರ್ಷಕ್ಕೆ ಒಂದು ಬಾರಿ ತಪ್ತಮುದ್ರಾಧಾರಣೆ ಮಾಡಿಕೊಳ್ಳಬೇಕು. ಶಾಸ್ತ್ರದಲ್ಲಿ ತಿಳಿಸಿದಂತೆ ಚಾತುರ್ಮಾಸ್ಯ ವೃತವನ್ನು ಆಚರಣೆ ಭಗವಂತ ಅನುಗ್ರಹ ಪಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಶ್ರೀಮಠದ ವ್ಯವಸ್ಥಾಪಕ ಪಂಡಿತ ದ್ವಾರಕನಾಥಾಚಾರ್ಯ, ಅರವಿಂದ ಅಚಾರ್ಯ, ಶ್ರೀನಿವಾಸ ಆಚಾರ್ಯ ಕರಣಂ, ಮಠಾಧಿಕಾರಿ ಆನಂದಾಚಾರ್ಯ ಸೇರಿದಂತೆ ಅನೇಕ ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net