ರಾಘವೇಶ್ವರ ಶ್ರೀಗಳ 32 ನೇ ಚಾತುರ್ಮಾಸ್ಯ

Gokarna News
Published on

ಗೋಕರ್ಣ:ನಮ್ಮ ಸ್ವಭಾಷೆಯನ್ನು ಸಂರಕ್ಷಿಸುವುದು ಕೂಡ ಸ್ವಧರ್ಮ ರಕ್ಷಣೆಯ ಪ್ರಧಾನ ಅಂಗವಾಗಿದೆ.ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಸ್ವಭಾಷೆಯನ್ನು ಆಧರಿಸಿದ ಚಾತುರ್ಮಾಸ್ಯ ಆಚರಿತವಾಗಿ ಮಾತೃಭಾಷಾ ಇತಿಹಾಸದ ವಿನೂತನ ಶಕಾರಂಭವೊAದಕ್ಕೆ ಶ್ರೀಕಾರ ಬರೆಯಲಿದೆ.ಎಂದು ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಆಶೀರ್ವದಿಸಿದರು. ಗುರುವಾರ ಅಶೋಕೆಯ ಶ್ರೀಮಠದಲ್ಲಿ ಆಯೋಜಿತವಾದ ಕಾರ್ಯಕರ್ತರ ವಿಶೇಷ ಸಭೆಯಲ್ಲಿ ಶ್ರೀಗಳು 32ನೆ ಚಾತುರ್ಮಾಸ್ಯದ ವಿವರವನ್ನು ಅನುಗ್ರಹಿಸಿದರು.

ಇಂದು ನಮ್ಮ ಕನ್ನಡ ಮಾತೃಭಾಷೆ ಪರಭಾಷಾ ಶಬ್ದಗಳ ಬಳಕೆಯ ಮೌಢ್ಯದಿಂದ ಆದಿಮೂಲದ ತನ್ನ ಅಂತಃಸತ್ವಗಳಿAದ ವಿಮುಖವಾಗಿದೆ.ನಮ್ಮ ಅಜ್ಞಾನ ಮತ್ತು ಅವಜ್ಞೆಯಿಂದ ಕನ್ನಡ ಭಾಷೆಯಲ್ಲಿ ವೈಭವೀಕರಿಸಲಾಗುತ್ತಿರುವ ಅನ್ಯ ಭಾಷಾ ಇಂಗ್ಲೀಷ್ ಶಬ್ದಗಳಿಂದ ಕನ್ನಡದ ಕಸ್ತೂರಿ ಪರಿಮಳ ಕಂಪನ್ನು ಕಳೆದುಕೊಳ್ಳುವ ಅತ್ಯಪಾಯದಲ್ಲಿದೆ.ಮುಂದೊAದು ದಿನ ಇಂಗ್ಲೀಷ್‌ನಂತಹ ಪರಭಾಷಾ, ಪರದೇಶೀಯ ಶಬ್ದಗಳೇ ಮಾತೃಭಾಷೆಯನ್ನು ವ್ಯಾಪಿಸಿಕೊಳ್ಳುವ ಆತಂಕ ಎದುರಾಗಿದೆ. ಇಂಗ್ಲೀಷ್ ಮಾತನಾಡುವುದು ದೊಡ್ಡಸ್ತಿಕೆ ಎಂಬ ಜಾಡ್ಯ ಮತ್ತು ಕೀಳರಿಮೆ ತೊಡೆದು ಹಾಕಿ ಶುದ್ಧ ಕನ್ನಡ ಮಾತೃಭಾಷೆಯನ್ನು ಪೃಥಃಕ್ಕರಿಸುವ ಮೊದಲ ಪ್ರಯತ್ನವಾಗಿ ಈ ಸಂವತ್ಸರದ 32ನೆ ಚಾತುರ್ಮಾಸ್ಯ ಆಚರಿತವಾಗುತ್ತಿರುವುದು ಚಾತುರ್ಮಾಸ್ಯದ ಧಾರ್ಮಿಕ ಇತಿಹಾಸದಲ್ಲಿ ಇದೇ ಮೊದಲಾಗಿದೆ.

ಸ್ವಭಾಷೆಯಲ್ಲಿ ನಿತ್ಯ ಬಳಸಲ್ಪಡುವ ಆಂಗ್ಲೀಯ ಶಬ್ದಗಳಿಗೆ ಯುಕ್ತ ಮತ್ತು ಸಶಕ್ತ ಪರ್ಯಾಯ ಕನ್ನಡ ಪದ ಸಂಯೋಜನೆಗಾಗಿ ವಿದ್ವಾಂಸ ಪ್ರಮುಖರು ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ.ಚಾತುರ್ಮಾಸ್ಯದಲ್ಲಿ ಕನ್ನಡ ಕುರಿತ ವಿವಿಧ ಗೋಷ್ಠಿಗಳು,ಕನ್ನಡ ಸಾಹಿತ್ಯ ಪರಂಪರೆಯ ವಿವಿಧ ಪುಸ್ತಕಗಳು ನಾಡಿಗೆ ಅರ್ಪಿತವಾಗಲಿವೆ.ಚಾತುರ್ಮಾಸ್ಯ ಆಯೋಜಿತವಾಗುವ ಪ್ರಮುಖ ಸ್ಥಳಗಳು ಮತ್ತು ಅಶೋಕೆಯ ಶ್ರೀಮಠದ ಪರಿಸರದಲ್ಲಿ ಎಲ್ಲೆಡೆ ಮಾತೃಭಾಷೆ ಕನ್ನಡದ ಫಲಕಗಳು ಬಾಷಾ ಬಲವತ್ತತೆಯನ್ನು ಸಂವರ್ಧಿಸುವ ಮಹತ್ಕಾರ್ಯದಲ್ಲಿ ಪ್ರತಿಷ್ಠಾಪಿತವಾಗಲಿದೆ.ಇವುಗಳ ಜೊತೆಗೆ ಮಾತೃಭಾಷೆಗೆ ಅನುಪಮ ಸೇವೆ ಸಲ್ಲಿಸಿದ ನಮ್ಮ ಹಿರಿಯ ಕನ್ನಡ ವಿದ್ವಾಂಸರ ಸಂಸ್ಮರಣೆ ಮತ್ತು ಗೌರವಾರ್ಪಣೆ ನಡೆಯಲಿದೆ. ಹೀಗೆ ಈ ಎಲ್ಲ ಕಾರ್ಯ ವಿಧಾನಗಳಿಂದ ನಾವೇ ಆವಾಹನೆಗೊಳಿಸಿಕೊಂಡಿರುವ ಇಂಗ್ಲೀಷ್ ಆಕ್ರಮಣವನ್ನು ಹಿಮ್ಮೆಟ್ಟಿಸಿ ನಮ್ಮತನದ ನಮ್ಮಭಾಷೆಯನ್ನು ಸಂರಕ್ಷಿಸಿಕೊಳ್ಳುವ ಪ್ರಯತ್ನಕ್ಕೆ ಸಮಸ್ತ ಸಮಾಜ ಮತ್ತು ಸಮಗ್ರ ನಾಡಿಗೆ ವಿಶ್ವಾವಸು ಸಂವತ್ಸರದ ಈ 32ನೆ ಚಾತುರ್ಮಾಸ್ಯ ಸಾರ್ವಕಾಲಿಕ ಆದರ್ಶವಾಗಿ ಉಳಿಯಲಿದೆ ಎಂದು ರಾಘವೇಶ್ವರ ಶ್ರೀಗಳು ಆಶೀವಾದವನ್ನು ಅನುಗ್ರಹಿಸಿದರು.

ಚಾತುರ್ಮಾಸ್ಯದ ಸೇವಾಬಿಂದುಗಳಾದ ಮಂಜುನಾಥ ಭಟ್ಟ ಸುವರ್ಣಗದ್ದೆ,ಪ್ರಸನ್ನಕುಮಾರ ಟಿ.ಜಿ.,ಜಿ.ಕೆ.ಹೆಗಡೆ,ಶ್ರೀಕಾಂತ ಪಂಡಿತ,ಉದಯಶAಕರ ಭಟ್ಟ ಮಿತ್ತೂರು,ಮಧು ಜಿ.ಕೆ,.ಜಿ.ಎಸ್.ಹೆಗಡೆ,ಸುಬ್ರಾಯ ಭಟ್ಟ ಮೂರೂರು,ರಾಜು ಹೆಬ್ಬಾರ,ಮಹೇಶ ಹೆಗಡೆ,ಜಿ.ವಿ.ಹೆಗಡೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net