ಆನೆಗುಂದಿ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳ ಚಾತುರ್ಮಾಸ್ಯ

Published on

ಪಡುಬಿದ್ರಿ: ಕಟಪಾಡಿ ಪಡುಕುತ್ಯಾರಿನ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಜಗದ್ಗುರು ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳ 21ನೇ ವರ್ಷದ ಚಾತುರ್ವಾಸ್ಯ ಜುಲೈ 10ರಿಂದ ಆರಂಭಗೊಳ್ಳಲಿದ್ದು ಈ ಬಗ್ಗೆ ವಿಶೇಷ ಸಭೆ ಪಡುಕುತ್ಯಾರಿನ ಶ್ರೀ ಸರಸ್ವತೀ ಯಾಗ ಶಾಲೆಯಲ್ಲಿ ನಡೆಯಿತು. ಚಾತುರ್ವಾಸ್ಯ ವ್ರತ ನಿರ್ವಹಣಾ ಸಮಿತಿ ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ, ಚಾತುರ್ವಾಸ್ಯದ ಯಶಸ್ವಿಗೆ ರಚಿಸಲಾದ ವಿವಿಧ ವಿಭಾಗಗಳ ಸಮಿತಿಯ ಪ್ರಮುಖರಿಗೆ ಅಗತ್ಯ ಸೂಚನೆ ನೀಡಿದರು.

ಪ್ರತೀ ಮನೆಯಿಂದಲೂ ಗುರುಪಾದುಕಾ ಪೂಜೆ

ಚಾತುರ್ವಾಸ್ಯದ ಸಮಯದಲ್ಲಿ ಪ್ರತಿ ಮನೆಯವರು ಕುಲಗುರುಗಳ ಗುರುಪಾದುಕಾ ಪೂಜೆಯಲ್ಲಿ ಪಾಲ್ಗೊಳ್ಳುವಂತೆ ಪ್ರಚಾರ ನಡೆಸಲಾಗುತ್ತದೆ. ಭಾನುವಾರ ಮತ್ತು ಗುರುವಾರ ಸೇರಿದಂತೆ ಜನದಟ್ಟೆಣೆಯಿರುವ ದಿನಗಳಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಬೆಳಗ್ಗೆ 10 ಗಂಟೆಯಿಂದ ವಿವಿಧ ಹಂತಗಳಲ್ಲಿ ಗುರುಪಾದುಕಾ ಪೂಜೆಯ ವ್ಯವಸ್ಥೆ ವಾಡಲಾಗುತ್ತದೆ. ಗುರುಭಿಕ್ಷಾವಂದನೆ, ಸಂತರ್ಪಣೆ, ವಸ್ತ್ರದಾನ ಸೇರಿದಂತೆ ಭಕ್ತರಿಗೆ ಅನುಕೂಲವಾಗುವ ರೀತಿಯಲ್ಲಿ ಗುರುಪಾದುಕಾ ಪೂಜೆ ನೇರವೇರಿಸಲು ಅವಕಾಶವಿದೆ. ಪ್ರತಿ ದಿನ ಬೆಳಗ್ಗೆ 8 ಗಂಟೆಗೆ ಮತ್ತು ಸಂಜೆ 5.30ಕ್ಕೆ ದುರ್ಗಾ ನಮಸ್ಕಾರ ಪೂಜೆ, 22ರಂದು ಗುರುಗಳ ಜನ್ಮ ವರ್ಧಂತಿಯ ಶುಭದಿನದಂದು ವರ್ಷಕ್ಕೆ ಒಂದು ಬಾರಿ ನಡೆಯುವ ಜಗದ್ಗುರುಗಳ ತುಲಾಭಾರ ಸೇವೆಯಲ್ಲಿ ಭಕ್ತರಿಗೆ ಭಾಗವಹಿಸಲು ಅವಕಾಶವಿದೆ.

ಯುವ ಸಾಧಕರಿಗೆ ಅಭಿನಂದನೆ

ಗುರುಗಳ ಜನ್ಮವರ್ಧಂತಿಯಂದು ಸವಾಜದ ಯುವ ಸಾಧಕರನ್ನು ಗೌರವಿಸಲಾಗುವುದು. ಶೇ.95ಕ್ಕಿಂತ ಹೆಚ್ಚು ಅಂಕಗಳಿಸಿದ ಎಸ್ಸೆಸೆಲ್ಸಿ, ಪಿಯುಸಿ ವಿಭಾಗದ ವಿದ್ಯಾರ್ಥಿಗಳನ್ನು, ಪದವಿ, ಸ್ನಾತಕೋತ್ತರ ಮತ್ತು ಇಂಜಿನಿಯರಿಂಗ್, ವೈದ್ಯಕೀಯ ಪದವಿ, ಹಾಗೂ ಪಿಎಚ್.ಡಿ ಪದವಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುವುದು. ಸವಾಜದ ಪಂಚಶಿಲ್ಪಗಳ ಪ್ರಾಮುಖ್ಯತೆ ಹಾಗೂ ಅವುಗಳ ಯಾಂತ್ರೀಕರಣ ನಾವಿನ್ಯತೆ ಮತ್ತು ಸಾಧಕರ ಬಗ್ಗೆ ಯುವಜನರಿಗೆ ಜಾಗೃತಿ ಮೂಡಿಸುವುದು ಮತ್ತು ಯುವಜನರು ಸವಾಜ ಸೇವೆಯಲ್ಲಿ ತೊಡಗಿಸಿಕ್ಕೊಳ್ಳುವ ಅಗತ್ಯತೆ ಬಗ್ಗೆ ಅರಿವು ಮೂಡಿಸುವ ವಿಚಾರಗಳ ಬಗ್ಗೆ ವಿಚಾರಗೋಷ್ಠಿಗಳನ್ನು ಚಾತುರ್ವಾಸ್ಯದ ವೇಳೆ ನಡೆಸಲಾಗುವುದು. ಶ್ರೀ ಸರಸ್ವತಿ ವಾತೃಮಂಡಳಿ ಹಾಗೂ ಗುರು ಸೇವಾ ಪರಿಷತ್ ಸವಾವೇಶಗಳ ವಿಶೇಷ ಕಾರ್ಯಕ್ರಮಗಳನ್ನು ಚಾತುರ್ವಾಸ್ಯದ ವೇಳೆ ಆಯೋಜಿಸಲಾಗುವುದು ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net