

ಕಾರಟಗಿ: ಪೀಠಾಧಿಪತಿ ಸುಬುಧೇಂದ್ರ ತೀರ್ಥರ ಚಾತುರ್ಮಾಸ ವ್ರತದ ಪ್ರಯುಕ್ತ ರಾಯಚೂರಿನ ಮಂತ್ರಾಲಯ ಮಠದಲ್ಲಿ ಬುಧವಾರ ಏರ್ಪಡಿಸಿದ್ದ ಕೋಲಾಟದಲ್ಲಿ ತಾಲೂಕಿನ ಕಿಂದಿಕ್ಯಾಂಪ್‌ನ ಹರೇ ನಿವಾಸ ತಂಡ ಪ್ರಥಮ ಸ್ಥಾನ ಪಡೆದಿದೆ.
ಶ್ರೀಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಆಯೋಜಿಸಿದ್ದ ಕೋಲಾಟದಲ್ಲಿ ರಾಜ್ಯ ಹಾಗೂ ನೆರೆಯ ಆಂಧ್ರಪ್ರದೇಶದ ಒಟ್ಟು 13 ತಂಡಗಳು ಪಾಲ್ಗೊಂಡಿದ್ದವು. ಕೋಲಾಟದ ಗುರುಗಳಾದ ಸತೀಶ್ ಮನ್ನೆ ನೇತೃತ್ವದಲ್ಲಿ ತಾಲೂಕಿನ ಕಿಂದಿಕ್ಯಾಂಪ್ ಹರೇ ಶ್ರೀನಿವಾಸ ತಂಡದ 19 ಸ್ಪರ್ಧಾಳು ನೀಡಿದ ಪ್ರದರ್ಶನಕ್ಕೆ ಪ್ರಥಮ ಸ್ಥಾನ ದೊರೆತಿದೆ. ಶ್ರೀಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್‌ನ ನಿರ್ದೇಶಕ ಕೆ.ಅಪ್ಪಣ್ಣಾಚಾರ್ಯ ಅವರು ವಿಜೇತರಿಗೆ ಪ್ರಶಂಸನಾ ಪತ್ರ ನೀಡಿ ಸತ್ಕರಿಸಿದ್ದಾರೆ.
ವೈ.ಪಾರ್ವತಿ, ವಿ.ಧನಲಕ್ಷ್ಮೀ, ವಿ.ಶಕುಂತಲಾ, ಬಿ.ಪದ್ಮಾವತಿ, ಬಿ.ರೇಣುಕಾ, ಪಿ.ರಜನಿ, ವೈ.ಶೈಲಜಾ, ಎಂ.ಸುಜಾತಾ, ಎನ್.ಪದ್ಮಾ, ಎನ್.ಮಂಗಾಲಕ್ಷ್ಮೀ, ಪಿ.ರಾಣಿ, ವಿ.ಶ್ರೀದೇವಿ, ಪಿ.ನಿತ್ಯಾಶ್ರೀ, ಎನ್.ಪಾವನಿ, ಎನ್.ರೋಜಾ, ಬಿ.ವೆಂಕಟರಮಣಿ, ವಿ.ಪಾರ್ವತಿ, ಎನ್.ವೆಂಕಟಲಕ್ಷ್ಮೀ, ಎನ್.ರಾಗದೀಪ ಕೋಲಾಟ ತಂಡದಲ್ಲಿದ್ದರು.