ರಂಗೋಲಿ ಚಿತ್ತಾರದಲ್ಲಿ ಛತ್ರಪತಿ ಶಿವರಾಜ್ಯಾಭಿಷೇಕ; ಬೆಳಗಾವಿಯ ಅಜಿತ್ ಔರಾದಕರ್ ಕೈಚಳಕಕ್ಕೆ ಜನ ಫಿದಾ

IMG-20230606-WA0048.webp
Published on

ಬೆಳಗಾವಿ : ಹಿಂದು ಸಮಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿಯ ಪಟ್ಟಾಭಿಷೇಕದ 350 ವರ್ಷಾಚರಣೆ ಅಂಗವಾಗಿ ಬೆಳಗಾವಿ ರಂಗೋಲಿ ಕಲಾವಿದ ಅಜಿತ್ ಔರಾದಕರ್ ಅವರು 3 ಅಡಿ ಎತ್ತರ ಹಾಗೂ 6 ಅಡಿ ಉದ್ದದ ಅಳತೆಯಲ್ಲಿ ರಾಯಗಡ್ ಕೋಟೆಯಲ್ಲಿನ ಶಿವರಾಜ್ಯಾಭಿಷೇಕದ ಸನ್ನವೇಶವನ್ನು ರಂಗೋಲಿಯಲ್ಲಿ ಬಿಡಿಸಿದ್ದಾರೆ.

ರಾಯಗಢ ಛತ್ರಪತಿ ಶಿವಾಜಿ ಮಹಾರಾಜ್‌ರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. 1674ರ ಜೂನ್ 6ರಂದು ಈ ರಾಯಗಢ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರ ಪಟ್ಟಾಭಿಷೇಕ ಮಾಡಲಾಗಿತ್ತು. ಅದನ್ನು ರಾಜ್ಯಾಭಿಷೇಕ ಎಂತಲೂ ಕರೆಯುತ್ತಾರೆ. ಅಲ್ಲಿಂದಲೇ ಸಾಮ್ರಾಜ್ಯ ವಿಸ್ತರಿಸಿಕೊಂಡು ಹಿಂದು ಸಾಮ್ರಾಜ್ಯವನ್ನು ಸ್ಥಾಪಿಸಿರುವ ಕೀರ್ತಿಗೆ ಶಿವಾಜಿ ಪಾತ್ರವಾಗಿದ್ದಾರೆ.

ಶಿವರಾಜ್ಯಾಭಿಷೇಕ ಸಮಾರಂಭ 350 ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿನ ವಡಗಾವಿಯ ಯಳ್ಳೂರ ರಸ್ತೆಯಲ್ಲಿನ ನಾಜರ್ ಕ್ಯಾಂಪ್‌ನಲ್ಲಿನ ಕಲಾರತ್ನ ಬಿಲ್ಡಿಂಗ್‌ನಲ್ಲಿ ಬರೋಬ್ಬರಿ 36 ಗಂಟೆಗಳ ಸಮಯ ತೆಗೆದುಕೊಂಡು ಆಕರ್ಷಕವಾಗಿ ರಂಗೋಲಿ ಚಿತ್ರ ಬಿಡಿಸಿದ್ದಾರೆ. ಜೂ.12 ರವರೆಗೆ ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 7ರ ವರೆಗೆ ಉಚಿತವಾಗಿ ವೀಕ್ಷಣೆಗೆ ಅವಕಾಶ ನೀಡಿದ್ದಾರೆ. ಸಾರ್ವಜನಿಕರಿಗೆ ಈ ಕುರಿತು ಮಾಹಿತಿ ಸಿಗುತ್ತಿದ್ದಂತೆಯೇ ಕಾಲವಿದ ಅಜಿತ್ ಮನೆಗೆ ಭೇಟಿ ನೀಡಿ, ವೀಕ್ಷಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಲಾವಿದನ ಕೈಚಳಕ್ಕೆ ಅಪಾರ ಪ್ರಸಂಶೆ ವ್ಯಕ್ತವಾಗಿದೆ.

ಛತ್ರಪತಿ ಶಿವಾಜಿಯ ಪಟ್ಟಾಭಿಷೇಕದ 350 ವರ್ಷಾಚರಣೆ ಅಂಗವಾಗಿ ರಂಗೋಲಿ ಕಲಾವಿದ ಅಜಿತ್ ಔರಾದಕರ್ ಅವರು ಶಿವರಾಜ್ಯಾಭಿಷೇಕದ ಸನ್ನವೇಶವನ್ನು ರಂಗೋಲಿಯಲ್ಲಿ ಬಿಡಿಸಿದ್ದಾರೆ.
ಛತ್ರಪತಿ ಶಿವಾಜಿಯ ಪಟ್ಟಾಭಿಷೇಕದ 350 ವರ್ಷಾಚರಣೆ ಅಂಗವಾಗಿ ರಂಗೋಲಿ ಕಲಾವಿದ ಅಜಿತ್ ಔರಾದಕರ್ ಅವರು ಶಿವರಾಜ್ಯಾಭಿಷೇಕದ ಸನ್ನವೇಶವನ್ನು ರಂಗೋಲಿಯಲ್ಲಿ ಬಿಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net