ಚಾರುಶ್ರೀ ನವದೆಹಲಿ ಪುರಪ್ರವೇಶ

05 SBG-1 Swamiji Delhi Visit (1)
ಸ್ವಸ್ತಿಶ್ರೀ ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವನ್ನು ದೆಹಲಿಯ ಮುಖ್ಯಮಂತ್ರಿ ರೇಖಾಗುಪ್ತಾ ಹಾಗೂ ಲೋಕಸಭಾಧ್ಯಕ್ಷ ಓಂ ಬಿರ್ಲಾ ಇತರರು ಸ್ವಾಗತಿಸಿ ಗೌರವಿಸಿದರು.
Published on

ಶ್ರವಣಬೆಳಗೊಳ: ಶ್ರೀ ಕ್ಷೇತ್ರದ ಪರಮಪೂಜ್ಯ ಜಗದ್ಗುರು ಅಭಿನವ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಪಟ್ಟಾಭಿಷಕ್ತರಾಗಿ ಎರಡು ವಸಂತ ಸಂದಿದೆ. ಇದೇ ಮೊದಲ ಬಾರಿಗೆ ರಾಷ್ಟ್ರರಾಜಧಾನಿ ನವದೆಹಲಿ ಪುರಪ್ರವೇಶ ಮಾಡಿದರು.

ಶ್ರೀಗಳ ಆಗಮನ ಹಿನ್ನೆಲೆಯಲ್ಲಿ ಪರಮಪೂಜ್ಯರನ್ನು ಭವ್ಯ ಹಾಗೂ ಭಕ್ತಿಪೂರ್ವಕ ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು. ತರುವಾಯ ದೇಶದ ಅತಿದೊಡ್ಡ ಬ್ರಹ್ಮಕಮಲ ಆಡಿಟೋರಿಯಂನ ಯಶೋಭೂಮಿ ಕನ್ವೆಷನ್‌ಹಾಲ್‌ನಲ್ಲಿ ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ ಸ್ವಾಮೀಜಿ ಅವರನನು ಅದ್ಧೂರಿ ಹಾಗೂ ಭಕ್ತಿಪೂರ್ವಕ ಗೌರವಿಸಿ ಸತ್ಕರಿಸಲಾಯಿತು.

ಸ್ವಾಮೀಜಿ ಅವರು ಪ್ರಪ್ರಥಮವಾಗಿ ದೆಹಲಿಗೆ ಪದಾರ್ಪಣೆ ಮಾಡಿದ ಹಿನ್ನೆಲೆಯಲ್ಲಿ ದೆಹಲಿಯ ನೂತನ ಮುಖ್ಯಮಂತ್ರಿ ರೇಖಾಗುಪ್ತಾ ಅವರು, ಲೋಕಸಭಾಧ್ಯಕ್ಷ ಓಂ ಬಿರ್ಲಾ ಸೇರಿ ಸ್ವಾಮೀಜಿ ಅವರನ್ನು ವಿನಮ್ರವಾಗಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ದೆಹಲಿಯ ಮೂವರು ಸಂಸದರು, ಶಾಸಕರು, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹಾಗೆಯೇ ದೆಹಲಿಯ ಅನೇಕ ಸಮಾಜ, ಸಮುದಾಯಗಳ ಪ್ರಮುಖರು, ಉದ್ಯಮಿಗಳು, ಅಧಿಕಾರಿಗಳು ಹಾಗೂ ದೆಹಲಿಯಲ್ಲಿ ನೆಲೆಸಿರುವ ಮೂರು ಸಾವಿರಕ್ಕೂ ಹೆಚ್ಚು ಶ್ರವಣಬೆಳಗೊಳದ ಭಕ್ತ ಜನರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಶ್ರೀಗಳನ್ನು ದರ್ಶನದಿಂದ ಸಂತಸಗೊಂಡರು.

ಈ ವೇಳೆ ಆಶೀರ್ವಚನ ನೀಡಿದ ಶ್ರೀಗಳು, ದೇಶದ ರಾಜಧಾನಿಗೆ ಇದೇ ಮೊದಲ ಬಾರಿಗೆ ಭೇಟಿ ಕೊಟ್ಟಿದ್ದು ಅತೀವ ಸಂತಸ ಸಂದಿದೆ. ಅದರಲ್ಲೂ ನೀವೆಲ್ಲರೂ ಸೇರಿ ಸತ್ಕರಿಸಿದ್ದು ಅವಿಸ್ಮರಣೀಯ ಕ್ಷಣ.ಶ್ರೀಕ್ಷೇತ್ರದ ಸಾವಿರಾರು ಮಂದಿ ಇಲ್ಲಿ ನೆಲೆಸಿರುವುದು ಮತ್ತೊಂದು ಸಂತಸ ಉಂಟು ಮಾಡಿದೆ ಎಂದು ನುಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net