ಚಾರ್ಮಾಡಿ ಸ್ವಯಂಘೋಷಿತ ಬಂದ್

charmady bund
Published on

ಬೆಳ್ತಂಗಡಿ: ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವರ್ತಕರು ಘೋಷಿಸಿದ ಐದು ದಿನಗಳ ಸ್ವಯಂಪ್ರೇರಿತ ಬಂದ್‌ನ ಮೊದಲ ದಿನ ಯಶಸ್ವಿಯಾಗಿದೆ.

ಸದಾ ಜನ, ವಾಹನಗಳಿಂದ ತುಂಬಿರುವ ಈ ಗ್ರಾಮದ ಮುಖ್ಯಪೇಟೆ ಕಕ್ಕಿಂಜೆ ಸ್ತಬ್ಧವಾಗಿತ್ತು. ನೆರಿಯ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆ ಇರಲಿಲ್ಲ. ಆದರೂ ವಾಹನ ಸಂಚಾರ ವಿರಳವಾಗಿತ್ತು. ಔಷಧ, ಅನಾರೋಗ್ಯ ಸಹಿತ ಇತರ ಅಗತ್ಯ ಸಂಚಾರಕ್ಕೆ ಅವಕಾಶ ನೀಡಲಾಯಿತು. ಬ್ಯಾಂಕ್, ಸಹಕಾರಿ ಸಂಘ, ಇತರ ಕಚೇರಿಗಳು ಕಾರ್ಯ ನಿರ್ವಹಿಸಿದರೂ ಗ್ರಾಹಕರು ಇರಲಿಲ್ಲ.

ಮುಂಡಾಜೆಯಲ್ಲೂ ಬಂದ್‌ಗೆ ಒಲವು: ಈಗಾಗಲೇ 60ಕ್ಕಿಂತ ಅಧಿಕ ಸಕ್ರಿಯ ಕೋವಿಡ್ ಪ್ರಕರಣಗಳಿರುವ ಮುಂಡಾಜೆ ಗ್ರಾಮದಲ್ಲಿ ಸಂಪೂರ್ಣ ಬಂದ್ ನಡೆಸುವ ಕುರಿತು ಗ್ರಾಮಸ್ಥರು ಒಲವು ವ್ಯಕ್ತಪಡಿಸಿದ್ದಾರೆ. ನೆರೆಯ ಚಾರ್ಮಾಡಿ ಹಾಗೂ ನೆರಿಯ ಗ್ರಾಮಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಸಂಪೂರ್ಣ ಬಂದ್ ಇರುವ ಕಾರಣ ಅಲ್ಲಿನ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿನ ಪೇಟೆಗೆ ಬರುವ ಸಾಧ್ಯತೆ ಇದೆ. ಇದರಿಂದ ಸೋಂಕು ಇನ್ನಷ್ಟು ಹರಡಲು ಕಾರಣವಾಗಬಹುದು ಎಂಬ ಚರ್ಚೆ ಶುರುವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net