ಟ್ರಕ್ ಮೈಮೇಲೆ ಹರಿದು ಯುವಕ ಸಾವು

web accident
Published on

ಬೆಳ್ತಂಗಡಿ: ಚಾರ್ಮಾಡಿ ಪಾಂಡಿಕಟ್ಟೆ ಎಂಬಲ್ಲಿ ಬೈಕ್‌ಗಳ ಮಧ್ಯೆ ನಡೆದ ಅಪಘಾತದಲ್ಲಿ ರಸ್ತೆಗೆ ಎಸೆಯಲ್ಪಟ್ಟ ಬೈಕ್ ಸವಾರ ಚಾರ್ಮಾಡಿ ಮೇಗಿನಮನೆ ಇಸ್ಮಾಯಿಲ್ ಎಂಬುವರ ಪುತ್ರ ನಜೀರ್ (21) ಎಂಬಾತ ಹಿಂಬದಿಯಿಂದ ಬಂದ ಟ್ರಕ್ ಮೈಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಾರ್ಮಾಡಿ ಸಮೀಪ ಸ್ನೇಹಿತನ ಮನೆಗೆ ತೆರಳಿ ಹಿಂದಿರುಗುತ್ತಿದ್ದಾಗ ಎದುರು ಬದಿಯಿಂದ ಬರುತ್ತಿದ್ದ ಬೈಕ್‌ಗೆ ನಜೀರ್ ಪ್ರಯಾಣಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದಿತ್ತು. ಇದರ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ನಜೀರ್ ಮೇಲೆಯೇ ಹಿಂದಿನಿಂದ ಬರುತ್ತಿದ್ದ ಟ್ರಕ್ ಚಲಿಸಿದ್ದರಿಂದ ಈ ಅವಘಡ ಸಂಭವಿಸಿದೆ. ಮಾಹಿತಿ ತಿಳಿದು ಬೆಳ್ತಂಗಡಿ ಸಂಚಾರಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅಗತ್ಯ ಕಾನೂನು ಕ್ರಮ ಕೈಗೊಂಡಿದ್ದಾರೆ. ಮೃತರು ತಂದೆ, ತಾಯಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net