ಶಾಲಾ ಆವರಣದಲ್ಲಿ ಶ್ರಮದಾನ

14.npk-2
ಮಡಿಕೇರಿ ಶೌರ್ಯ ವಿಪತ್ತು ನಿರ್ವಹಣ ಘಟಕದ ವತಿಯಿಂದ ಮಡಿಕೇರಿ ನಗರದ ಕನಕದಾಸ ರಸ್ತೆಗೆ ಹೊಂದಿಕೊಂಡಿರುವ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿದ್ದ ಕಾಡು ಕಡಿದು ಸ್ವಚ್ಛಗೊಳಿಸಲಾಯಿತು.
Published on

ನಾಪೋಕ್ಲು: ಮಡಿಕೇರಿ ಶೌರ್ಯ ವಿಪತ್ತು ನಿರ್ವಹಣ ಘಟಕದ ವತಿಯಿಂದ ಸೋಮವಾರ ಶಾಲಾ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು.

ಮಡಿಕೇರಿ ನಗರದ ಕನಕದಾಸ ರಸ್ತೆಗೆ ಹೊಂದಿಕೊಂಡಿರುವ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿದ್ದ ಕಾಡು ಕಡಿದು ಸ್ವಚ್ಛಗೊಳಿಸಲಾಯಿತು. ಶೌರ್ಯ ವಿಪತ್ತು ನಿರ್ವಹಣ ಘಟಕದ ಮೇಲ್ವಿಚಾರಕರಾದ ವಿನೋದಾ ಮತ್ತು ಜ್ಞಾನವಿಕಾಸದ ಮಾಲಿನಿ ಸಂಯೋಜಕರಾದ ರೋಹಿಣಿ, ಲೀಲಾ ಶೇಷಮ್ಮ, ಮುನಿರ್ ಮಾಚರ್, ರವಿಕುಮಾರ್, ಹರಿಣಾಕ್ಷಿ,, ಪ್ರೇಮಾ, ಯಶೋದಾ, ಲತಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net