ದಾನ, ಧರ್ಮ ಮಾಡುವ ಮನೋಭಾವ ರೂಢಿಸಿಕೊಳ್ಳಿ: ಸಂಗನಾಳದಲ್ಲಿ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಅನಿಸಿಕೆ

sanganal
ಯಲಬುರ್ಗಾ ತಾಲೂಕಿನ ಸಂಗನಾಳ ಹಾಲಕೆರೆ ಶ್ರೀ ಅನ್ನದಾನೇಶ್ವರ ಶಾಖಾ ಮಠದಲ್ಲಿ ಅನ್ನದಾನೇಶ್ವರ ಮಹಾಪುರಾಣ ಮಂಗಲೋತ್ಸವ ನಿಮಿತ್ತ ಗುರುವಾರ 501 ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮದಲ್ಲಿ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಅಭಿನವ ಚನ್ನಬಸವ ಸ್ವಾಮೀಜಿ, ಶ್ರೀ ಶಿವಲಿಂಗದೇಶಿಕರು, ಶ್ರೀ ಸಿದ್ದಲಿಂಗ ದೇವರು ಇದ್ದರು.
Published on

ಯಲಬುರ್ಗಾ: ಪ್ರತಿಯೊಬ್ಬರೂ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ ದಾನ, ಧರ್ಮ ಮಾಡುವ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನಮಠದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.


ತಾಲೂಕಿನ ಸಂಗನಾಳ ಗ್ರಾಮದ ಹಾಲಕೆರೆ ಶ್ರೀ ಅನ್ನದಾನೇಶ್ವರ ಶಾಖಾ ಮಠದಲ್ಲಿ ಗುರುವಾರ ಶ್ರೀ ಅನ್ನದಾನೇಶ್ವರ ಪುರಾಣ ಮಹಾಮಂಗಲೋತ್ಸವ ನಿಮಿತ್ತ 501 ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.

ಧಾರ್ಮಿಕ ಕಾರ್ಯಕ್ರಮ ನಡೆಸುವುದಕ್ಕೆ ಸಂಗನಾಳ ಹೆಸರುವಾಸಿ

ಧಾರ್ಮಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸುವುದಕ್ಕೆ ಸಂಗನಾಳ ಹೆಸರುವಾಸಿಯಾಗಿದೆ. ಭಕ್ತರು ಭವ್ಯ ಮಂದಿರ ಕಟ್ಟಿಸಿ, ಲಿಂ.ಶ್ರೀ ಅನ್ನದಾನ ಮಹಾಸ್ವಾಮಿಗಳ ಕತೃ ಗದ್ದುಗೆ ನಿರ್ಮಿಸಿರುವುದು ಉತ್ತಮ ಕಾರ್ಯವಾಗಿದೆ. ಈ ಹಿಂದೆ ಮಠದ ಆಶ್ರಯದಲ್ಲಿ ಹತ್ತು ಸಾವಿರ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ.

ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ಶಿವಾನುಭವ ಕಾರ್ಯಕ್ರಮ ನಡೆಸಲು ಮಠದ ದೇವರು ಮುಂದಾಗುತ್ತಾರೆ. ಗ್ರಾಮದ ಭಕ್ತರು ನೀಡಿರುವ ಧನ ಸಹಾಯದಿಂದ ಶಿಕ್ಷಣ ಸಂಸ್ಥೆ ಆರಂಭಿಸಲಾಗುವುದು ಎಂದು ತಿಳಿಸಿದರು.


ನಿಡಗುಂದಿಕೊಪ್ಪದ ಶಾಖಾ ಶಿವಯೋಗಮಂದಿರದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಸಂಗನಾಳದ ಹಾಲಕೆರೆ ಶಾಖಾ ಮಠದ ಶ್ರೀ ಶಿವಲಿಂಗದೇಶಿಕರು, ಸೋಮಸಮುದ್ರದ ಕೊಟ್ಟೂರುಮಠದ ಶ್ರೀ ಸಿದ್ದಲಿಂಗ ದೇವರು ಸಾನಿಧ್ಯವಹಿಸಿದ್ದರು.

ಪುರಾಣ ಪ್ರವಚನಕಾರ ನಿಡಗುಂದಿಯ ಸಿದ್ದಲಿಂಗ ಶಾಸ್ತ್ರಿ, ತಬಲಾವಾದಕ ಶರಣಯ್ಯ ಗವಾಯಿ, ಪ್ರಾಚಾರ್ಯ ಡಾ. ಎಸ್.ಎಸ್. ಶಿವರಡ್ಡಿ, ಪ್ರಮುಖರಾದ ಮಲ್ಲಿಕಾರ್ಜುನ ಗೌಡ್ರ, ಎನ್.ಎಸ್.ಹೊನ್ನೂರು, ಕೊಟ್ರಪ್ಪ ತೋಟದ, ರತ್ನಾ ಪಾಟೀಲ್, ಸಿದ್ದರಾಮಪ್ಪ ಹೊಸಂಗಡಿ, ಈರಣ್ಣ ಹಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net