ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು ಜ. 16ರಂದು ಸಂಜೆ 6 ಗಂಟೆಗೆ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಸುಶೀಲಾ ಮಲ್ಲೇಶಪ್ಪ ಅಪ್ಪಾಜಿ ದತ್ತಿ ಕಾರ್ಯಕ್ರಮ ಏರ್ಪಡಿಸಿದೆ. ಬೆಳಗಾವಿಯ ರುದ್ರಾಂಬಿಕಾ ಮಹಾಂತೇಶ ಯಾಳಗಿ ಜಾನಪದ ಮತ್ತು ವಚನ ಗಾಯನ ಪ್ರಸ್ತುತಪಡಿಸುವರು. ಡಾ. ಮಹೇಶ ಹೊರಕೇರಿ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.