ನುಡಿಯ ರೂಪವೇ ವಚನಗಳು: ಲೇಖಕಿ ಸುಜಾತಾ ಕೃಷ್ಣ ಅಭಿಮತ

Charity lecture programme Mandya
Published on

ಮಂಡ್ಯ: ಶರಣ ಸಾಹಿತ್ಯ ಎಂದರೆ ನಮ್ಮ ಬದುಕಿನ ಧ್ಯೇಯೋದ್ದೇಶಗಳನ್ನು ಸರಳವಾಗಿ ಕಾಯಾ ವಾಚಾ ಮನಸಾ ಆವಾಹಿಸಿಕೊಳ್ಳುವಲ್ಲಿ ನಡೆ ನುಡಿಯ ಶುದ್ದತೆಯನ್ನು ಪ್ರಸಾದಿಸುವಂಥದ್ದು. ಇದರ ನುಡಿ ರೂಪವೇ ವಚನಗಳು ಎಂದು ಲೇಖಕಿ ಸುಜಾತಾ ಕೃಷ್ಣ ಅಭಿಪ್ರಾಯಪಟ್ಟರು.

ನಗರದ ಡ್ಯಾಫೊಡಿಲ್ಸ್ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಚನಗಳು ಮೌಖಿಕ ಸಂಪ್ರದಾಯದಿಂದ ಉದಿಸಿದ ಭಾವ ವಾಹಿನಿಗಳು. ಹೂವು ಅರಳುವಂತೆ, ಹಕ್ಕಿಗಳು ಹಾರಾಡುವಂತೆ, ನದಿಗಳು ಹರಿಯುವಂತೆ, ಸೂರ್ಯನು ಬೆಳಗುವಂತೆ, ತಾರೆಗಳು ಮಿನುಗುವಂತೆ, ಹುಣ್ಣಿಮೆಯ ಬೆಳದಿಂಗಳಿನಂತೆ ಗಾಳಿ ಬೀಸುವಂತೆ ಇವು ಅತ್ಯಂತ ಸಹಜವಾದುವು. ಇಂತಹ ಶರಣರ ಹಾಗೂ ವಚನಗಳ ಕ್ರಿಯಾತ್ಮಕ ಉತ್ಸಾಹ ನಮ್ಮಲ್ಲಿ ಮೈಗೂಡುವಂತೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ನಿರಂತರ ಕೆಲಸ ಮಾಡುತ್ತಲೇ ಬರುತ್ತಿದೆ ಎಂದು ನುಡಿದರು.

ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ರಚಿತ ‘ನುಡಿಕಿರಣ’ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕದಳಿ ವೇದಿಕೆ ಅಧ್ಯಕ್ಷೆ ಪದ್ಮಾ ಸೋಮಶೇಖರ್, ಮುಖ್ಯಶಿಕ್ಷಕಿ ನಯನಗೌಡ, ಅಶ್ವಿನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net