ದಾನದಿಂದ ಕೈಗಳಿಗೆ ಶೋಭೆ

jyp bus
ಜಯಪುರದ ಬಿಜಿಎಸ್ ಆವರಣದಲ್ಲಿ ರೋಟರಿ ಕ್ಲಬ್ ನಿರ್ಮಿಸಿದ ವಿದ್ಯಾರ್ಥಿಗಳ ತಂಗುದಾಣವನ್ನು ಶ್ರೀ ಗುಣನಾಥ ಸ್ವಾಮೀಜಿ ಉದ್ಘಾಟಿಸಿದರು. ಸ್ಮಿತಾ, ಎಚ್.ಎಂ.ಸತೀಶ್, ಮಂಜುನಾಥ್ ಇತರರಿದ್ದರು.
Published on

ಜಯಪುರ: ಕೈಗಳಿಗೆ ಶೋಭೆ ಬರುವುದು ನಾವು ತೊಡುವ ಆಭರಣಗಳಿಂದಲ್ಲ, ದಾನದಿಂದ. ಹಾಗಾಗಿ ಉಳ್ಳವರು ಇಲ್ಲದವರಿಗೆ ಕೊಡುವುದೇ ಮಾನವ ಧರ್ಮ. ರೋಟರಿ ಕ್ಲಬ್‌ನ ಇಂಥ ಕೆಲಸ ಅಭಿನಂದನೀಯ ಎಂದು ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.

ಪಟ್ಟಣದ ಬಿಜಿಎಸ್ ಆವರಣದಲ್ಲಿ ರೋಟರಿ ಕ್ಲಬ್ ನಿರ್ಮಿಸಿದ ವಿದ್ಯಾರ್ಥಿಗಳ ತಂಗುದಾಣವನ್ನು ಶುಕ್ರವಾರ ಉದ್ಘಾಟಿಸಿ ಆಶೀರ್ವಚನ ನೀಡಿ, ಎಲ್ಲರನ್ನೂ ಸಮಾನವಾಗಿ ಕಾಣುವುದು ಧರ್ಮ. ಬೇರೆಯವರಿಗೆ ಸಹಾಯ ಮಾಡುವುದರಿಂದ ಶ್ರೇಷ್ಠನಾಗುತ್ತಾನೆ. ತೆಂಗಿನ ಮರದ ಮೊದಲ ಗರಿಯ ಅಚ್ಚು ಮರದ ಜೀವನಪೂರ್ತಿ ಇರುವಂತೆಯೇ ನಾವು ಮಾಡುವ ದಾನ ನಮ್ಮೊಂದಿಗೆ ಶಾಶ್ವತವಾಗಿರುತ್ತದೆ ಎಂದರು.
ಹೆಚ್ಚು ಫಸಲು ಬೆಳೆಯುವ ದೃಷ್ಟಿಯಿಂದ ರೈತರು ರಸಗೊಬ್ಬರ, ಕೀಟನಾಶಕಗಳನ್ನು ಹೆಚ್ಚು ಬಳಸುತ್ತಿರುವುದರಿಂದ ಭೂಮಿತಾಯಿ ಕಲುಷಿತವಾಗಿ ಮಣ್ಣಿನ ಆರೋಗ್ಯ ಹಾಳಾಗುತ್ತಿದೆ. ಇದರಿಂದ ನಮ್ಮ ಆರೋಗ್ಯವೂ ಹಾಳಾಗುತ್ತದೆ. ಹಾಗಾಗಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಜಯಪುರ ರೋಟರಿ ಕ್ಲಬ್ ಅಧ್ಯಕ್ಷೆ ಸ್ಮಿತಾ ಸುರೇಶ್ ಮಾತನಾಡಿ, ಕೆಲವು ದಾನಿಗಳ ನೆರವಿನಿಂದ ತಂಗುದಾಣ ನಿರ್ಮಿಸಲಾಗಿದೆ ಎಂದರು.
ರೋಟರಿ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ, ಅಸಿಸ್ಟೆಂಟ್ ಗವರ್ನರ್ ಜೆ.ಎಂ. ಹರ್ಷ, ಜಯಪುರ ರೋಟರಿ ಕಾರ್ಯದರ್ಶಿ ರಮೇಶ್, ಖಜಾಂಚಿ ಸುರೇಶ್, ಶ್ರೀಕರ, ಡಿ.ಬಿ.ರಾಜೇಂದ್ರ, ಎ.ಸಿ.ವಜ್ರಪ್ಪ, ಉಪನ್ಯಾಸಕಿ ಗಾಯತ್ರಿದೇವಿ, ಪ್ರಾಚಾರ್ಯರಾದ ಮುಸ್ತಾಕ್ ಅಹಮದ್, ಮುರಳೀಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net