ದಾನ, ಧರ್ಮದಿಂದ ಕಷ್ಟಗಳು ದೂರ

8ARATAL1
Published on

ಅರಟಾಳ: ಎಲ್ಲಕ್ಕಿಂತ ಮಿಗಿಲಾದದ್ದು ದಾನ. ದಾನ ಮಾಡುವುದರಿಂದ ಕಷ್ಟಗಳು ದೂರವಾಗುತ್ತವೆ. ಚನ್ನಸಂಗಮೇಶ್ವರ ಸಾಧು ಮಹಾರಾಜರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗೋಣ ಎಂದು ಹಿಪ್ಪರಗಿ ಮತ್ತು ಬಾಡಗಿ ಸಿದ್ಧಲಿಂಗಸಾಧು ಮಹಾರಾಜರು ಹೇಳಿದರು.

ಸಮೀಪದ ಬಾಡಗಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚನ್ನಸಂಗಮೇಶ್ವರ ಸಾಧು ಮಹಾರಾಜರ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಶರಣರ ವಚನಗಳನ್ನು ಮನದಟ್ಟು ಮಾಡಿಕೊಳ್ಳಬೇಕು. ಪ್ರತಿ ದಿನ ಗುರು ನಾಮಸ್ಮರಣೆ ಮಾಡಬೇಕು. ಮನಸ್ಸು ದ್ವೇಷರಹಿತವಾಗಿದ್ದರೆ, ಜಗತ್ತು ಸುಂದರವಾಗಿ ಕಾಣುತ್ತದೆ ಎಂದರು.

ಸಂಗಯ್ಯ ಹಿರೇಮಠ ಮಾತನಾಡಿ, ಜಾತಿಭೇದ ಮಾಡದೆ ಎಲ್ಲರೂ ಒಂದೇ ಎಂದು ಸಾರಿದ ಮಹಾತ್ಮ ಬಸವಣ್ಣನವರ ಮಾರ್ಗದಲ್ಲಿ ಸಾಗಬೇಕು ಎಂದು ಹೇಳಿದರು.

ಚನ್ನಸಂಗಮೇಶ್ವರ ಮಹಾರಾಜರ ರಥೋತ್ಸವದ ಜತೆಗೆ ಪಲ್ಲಕ್ಕಿ ಉತ್ಸವ, ಡೊಳ್ಳುಕುಣಿತ ಜರುಗಿತು. ಹಿಪ್ಪರಗಿ ಸಿದ್ಧಾರೂಢ ಶರಣರು, ಗದಗದ ಮಂಜುನಾಥ ಮಡಿವಾಳ, ಗ್ರಾಪಂ ಸದಸ್ಯ ಸಿದ್ದು ಹಳ್ಳಿ, ಶಿವಾನಂದ ನೇಮಗೌಡ, ರಾಮಚಂದ್ರ ಬಿಜ್ಜರಗಿ, ಯಲ್ಲಪ್ಪ ಪಡಸಲಗಿ, ಚಂದ್ರಕಾಂತ ಮಮದಾಪುರ, ವಿಠ್ಠಲ ಮುಧೋಳ, ಚನ್ನಪ್ಪ ನೇಮಗೌಡ, ಬಿ.ಕೆ.ಮುಧೋಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net