ದಾನ ಹಾಗೂ ದಾಸೋಹ ಎರಡೂ ಒಂದೇ ಅಲ್ಲ : ಪ್ರೊ.ಎಂ.ಕೃಷ್ಣೇಗೌಡ ಅಭಿಮತ

DSC_34345
Published on

ಮೈಸೂರು: ದಾನ ಹಾಗೂ ದಾಸೋಹ ಎರಡೂ ಒಂದೇ ಅಲ್ಲ, ಇವೆರಡರ ನಡುವೆ ಸಾಕಷ್ಟು ವ್ಯತ್ಯಾಸವಿದೆ. ದಾಸೋಹ ವೀರಶೈವ ಲಿಂಗಾಯತ ಪರಂಪರೆ ಶ್ರೇಷ್ಠ ಪರಿಕಲ್ಪನೆಯಾಗಿದ್ದು, ದಾನಕ್ಕಿಂತಲೂ ಮಹತ್ತರವಾದ ಧ್ಯೇಯ ದಾಸೋಹಕ್ಕಿದೆ ಎಂದು ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಅಭಪ್ರಾಯಪಟ್ಟರು.

ಜೆಎಸ್‌ಎಸ್ ಮಹಾವಿದ್ಯಾಪೀಠ, ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ವತಿಯಿಂದ ನಗರದ ಜೆಎಸ್‌ಎಸ್ ಆಸ್ಪತ್ರೆ ಆವರಣದ ಶ್ರೀ ರಾಜೇಂದ್ರ ಭವನದಲ್ಲಿ ಶನಿವಾರ ಸರ್ವಮಂಗಳಮ್ಮ ಮತ್ತು ಕೆ.ಎನ್.ವೀರಭದ್ರಪ್ಪ ಅವರ ಸ್ಮರಣಾರ್ಥ ಏರ್ಪಡಿಸಿದ್ದ ಶಿವಾನುಭವ ದಾಸೋಹ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದಾನ ನೀಡುವ ಕೆಲವರಲ್ಲಿ ಅಹಂ ಇರುತ್ತದೆ. ನಮ್ಮಲ್ಲಿರುವ ಸಂಪತ್ತನ್ನು ಬೇರೆಯವರಿಗೆ ಅನುಕೂಲವಾಗಲಿ ಎಂದು ಕೆಲವರು ದಾನ ನೀಡುತ್ತಾರೆ. ಆದರೆ ದಾಸೋಹ ನೀಡುವಾಗ ವಿನಯ ಹಾಗೂ ಭಕ್ತಿ ಇರುತ್ತದೆ. ಹಾಗಾಗಿ ದಾಸೋಹದ ಪರಿಕಲ್ಪನೆಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಿದೆ. ಜತೆಗೆ ಜ್ಞಾನ ದಾಸೋಹವನ್ನೂ ನಡೆಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀ ಕುದೇರು ಮಠದ ಶ್ರೀ ಗುರುಶಾಂತ ಸ್ವಾಮೀಜಿ, ಶ್ರೀ ಮುಡಿಗುಂಡ ವಿರಕ್ತ ಮಠದ ಶ್ರೀ ಶ್ರೀಕಂಠ ಸ್ವಾಮೀಜಿ, ವಿಶ್ರಾಂತ ಪ್ರಾಂಶುಪಾಲ ಪ್ರೊ.ಚಂದ್ರಶೇಖರ್, ಕನ್ನಡ ಸಾಹಿತ್ಯ ಕಲಾ ಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ನಗರ ಪಾಲಿಕೆ ಮಾಜಿ ಸದಸ್ಯರಾದ ಕೆ.ವಿ.ಮಲ್ಲೇಶ್, ಕೆ.ವಿ. ಶ್ರೀಧರ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net