ಜಡ್ಜ್ ಬಿ ಪರೀಕ್ಷೆಯಲ್ಲಿ ಚರೀಷ್ ಉತ್ತೀರ್ಣ

ಜಡ್ಜ್ ಬಿ ಪರೀಕ್ಷೆಯಲ್ಲಿ ಉತ್ತೀರ್ಣನಾದ ಚರೀಷ್‌ನನ್ನು ಕಾವೇರಿ ಕಾಲೇಜಿನಲ್ಲಿ ಅಭಿನಂದಿಸಲಾಯಿತು. ವೀಣಾ, ಪ್ರಿಯಾ, ರಾಘವೇಂದ್ರ ಇದ್ದರು.
ಜಡ್ಜ್ ಬಿ ಪರೀಕ್ಷೆಯಲ್ಲಿ ಉತ್ತೀರ್ಣನಾದ ಚರೀಷ್‌ನನ್ನು ಕಾವೇರಿ ಕಾಲೇಜಿನಲ್ಲಿ ಅಭಿನಂದಿಸಲಾಯಿತು. ವೀಣಾ, ಪ್ರಿಯಾ, ರಾಘವೇಂದ್ರ ಇದ್ದರು.
Published on

ವಿರಾಜಪೇಟೆ: ಬೆಂಗಳೂರಿನ ಕೋರಮಂಗಲದಲ್ಲಿ ಆಯೋಜಿಸಿದ್ದ ಜಡ್ಜ್ ಬಿ ಪರೀಕ್ಷೆಯಲ್ಲಿ ಇಲ್ಲಿನ ಕಾವೇರಿ ಕಾಲೇಜಿನ ವಿದ್ಯಾರ್ಥಿ ಚರೀಷ್ ಪೊನ್ನಣ್ಣ ಉತ್ತೀರ್ಣರಾಗಿದ್ದು, ಆ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಕರಾಟೆ ಸ್ಪರ್ಧೆಗಳ ತೀರ್ಪುಗಾರನಾಗುವ ಅರ್ಹತೆ ಪಡೆದಿದ್ದಾರೆ.

ಅರ್ಹತಾ ಪರೀಕ್ಷೆಯಲ್ಲಿ ಕೊಡಗಿನಿಂದ ಎಂಟು ಜನರು ಪಾಲ್ಗೊಂಡಿದ್ದು, ಇದರಲ್ಲಿ ಮೂರು ಜನ ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಕಾವೇರಿ ಕಾಲೇಜಿನ ಚರಿಷ್ ಕೂಡ ಒಬ್ಬರು. ಈ ಪರೀಕ್ಷೆಯಲ್ಲಿ ಒಟ್ಟು 270 ಪ್ರಶ್ನೆಗಳಿದ್ದು, ಇದರಲ್ಲಿ 200 ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈತ ಬೋಪಯ್ಯ ಹಾಗೂ ಪುಷ್ಪಾ ದಂಪತಿ ಪುತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net