ನಾಗಪ್ಪನಗಹಳ್ಳಿಯಲ್ಲಿ ಸೀಗೆ ಯಲ್ಲಮ್ಮ ಜಾತ್ರೆ

dj p pura devi
Published on

ಪರಶುರಾಮಪುರ: ಸಮೀಪದ ನಾಗಪ್ಪನಹಳ್ಳಿ ಗ್ರಾಮದ ಸೀಗೆಯಲ್ಲಮ್ಮ ದೇವಿಯ ಕಾರ್ತಿಕೋತ್ಸವದ ಅಂಗವಾಗಿ ಈಚೆಗೆ ರಥೋತ್ಸವ ನಡೆಯಿತು.

ಇಲ್ಲಿನ ನಾಗಪ್ಪನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಯಲ್ಲಮ್ಮ ದೇವಿಯ ಜಾತ್ರೆ ನಡೆಸಿದರು. ಊರ ಮುಂದಿನ ದೇವಸ್ಥಾನದಲ್ಲಿ ವಿವಿಧ ಹೂವುಗಳಿಂದ ಉತ್ಸವ ಮೂರ್ತಿಯನ್ನು ಅಲಂಕರಿಸಿ ಪೂಜಿಸಿದರು.

ದೇವಸ್ಥಾನ ಸಮಿತಿಯವರು ರಥದಲ್ಲಿ ದೇವಿಯ ಮೂರ್ತಿಯನ್ನು ಪ್ರತಿಷ್ಟಾಪಿಸಿದರು. ನಂತರ ಭಕ್ತರು ಹಣ್ಣು, ಕಾಯಿ, ಹೂವು, ಸೂರು ಬೆಲ್ಲ, ಮೆಣಸು ರಥಕ್ಕೆ ತೂರುವ ಮೂಲಕ ಭಕ್ತಿ ಸಮರ್ಪಿಸಿದರು. ರಥವನ್ನು ಎಳೆದರು.

ದೇವಿಯ ರಥೋತ್ಸವದಲ್ಲಿ ಸುತ್ತೇಳು ಹಳ್ಳಿಗಳ ಜನರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಆಂಧ್ರ ಮತ್ತು ಕರ್ನಾಟಕ ರಾಜ್ಯಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net