

ಶಿರೋಳ: ಸಮೀಪದ ರಡ್ಡೇರನಾಗನೂರ ಗ್ರಾಮದ ಗುರು ಬ್ರಹ್ಮಾನಂದ ಪರಮಹಂಸರ ರಥೋತ್ಸವ ಗುರುವಾರ ಅದ್ದೂರಿಯಾಗಿ ನೆರವೇರಿತು. ಅಂದು ಬೆಳಗ್ಗೆ ಗದುಗೆಗೆ ರುದ್ರಾಭಿಷೇಕ ಮಧ್ಯಾಹ್ನ 3ಗಂಟೆಗೆ ಗದಗದ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪರಪಮಪೂಜ್ಯ ಡಾ. ಕಲ್ಲಯ್ಯ ಅಜ್ಜನವರಿಗೆ ತುಲಾಭಾರ ಸೇವೆ ಜರುಗಿತು. ಸಂಜೆ 5.30ಕ್ಕೆ ಬ್ರಹ್ಮಾನಂದ ಪರಮಹಂಸರ ರಥೋತ್ಸವವು ಭೈರನಹಟ್ಟಿಯ ಮ.ನಿ.ಪ್ರ ಶಾಂತಲಿಂಗ ಸ್ವಾಮೀಜಿ ಹಾಗೂ ಚಿಕ್ಕುಂಬಿಯ ಅಭಿನವ ನಾಗಲಿಂಗ ಸ್ವಾಮೀಜಿ, ನರಗುಂದ ಪಂಚಗೃಹ ಗುಡ್ಡದ ಹಿರೇಮಠದ ಸಿದ್ಧ್ದಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಜಾತ್ರೆಯ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಕೋಲಾಟ, ವೀರ ಪುರವಂತರು, ಶಿರೋಳ ಹಾಗೂ ರಡ್ಡೇರನಾಗನೂರ ಗ್ರಾಮದ ದುರ್ಗಾದೇವಿ, ಬೃಂದಾವನ ಮಹಿಳಾ ಭಜನೆ ಮಂಡಳಿಗಳು ಜಾತ್ರೆಯ ಮೆರುಗು ಹೆಚ್ಚಿಸಿದವು. ರಾತ್ರಿ 10.30ಕ್ಕೆ ಗದಗ ಶಿವಯೋಗಿ ಪುಟ್ಟರಾಜ ಕಲಾ ಬಳಗದಿಂದ ‘ಮಾನವಂತರ ಮನೆತನ’ ನಾಟಕ ಪ್ರದರ್ಶನಗೊಳ್ಳಲಿದೆ.