ಶ್ರೀಧರ ಪದ್ಮಾವತಿ ದೇವಿಯ ರಥೋತ್ಸವ

16bkl4-TERU
Published on

ಭಟ್ಕಳ: ದತ್ತ ಜಯಂತಿ ಅಂಗವಾಗಿ ತಿಮ್ಮಯ್ಯ ದಾಸರಿಂದ ಸಂಸ್ಥಾಪನೆಗೊಂಡ ಶ್ರೀಧರ ಪದ್ಮಾವತಿ ದೇವಿಯ ರಥೋತ್ಸವವು ಸಂಭ್ರಮದಿಂದ ನಡೆಯಿತು.

ಸೋಮವಾರ ಬೆಳಗ್ಗೆಯಿಂದ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ಜರುಗಿದವು. ಶ್ರೀ ಗುರು ಪಾದುಕ ಪೂಜೆ, ಪದ್ಮಾವತಿ ದೇವಿಗೆ ಪಂಚಾಮೃತ ಅಭಿಷೇಕ, ಮಹಾಪೂಜೆ, ರಥೋತ್ಸವದ ಅಂಗವಾಗಿ ದಿಗ್ಬಲಿ, ರಥಬಲಿ ನಡೆಯಿತು. ಮಹಾಪೂಜೆಯ ನಂತರದಲ್ಲಿ ಅನ್ನಸಂತರ್ಪಣೆ ನಡೆಯಿತು. ಸಂಜೆ 4.30ಕ್ಕೆ ರಥೋತ್ಸವದ ಮೆರವಣಿಗೆ ಪ್ರಾರಂಭವಾಗಿ ಪುರಬೀದಿಯಲ್ಲಿ ಸಾಗಿತು. ಮಾರ್ಗದುದ್ದಕ್ಕೂ ಭಕ್ತಾದಿಗಳು ದೇವರಿಗೆ ಹಣ್ಣುಕಾಯಿ ಅರ್ಪಿಸಿದರು. ಮಂಗಳವಾದ್ಯಗಳ ಜತೆ ಭಜನೆಗಳಿಗೆ ಹೆಜ್ಜೆ ಹಾಕಿದ ಭಜನಾ ತಂಡದ ಕುಣಿತವು ಮೆರವಣಿಗೆಯ ರಂಗನ್ನು ಹೆಚ್ಚಿಸಿತು.

ರಥೋತ್ಸವದ ಮೆರವಣಿಗೆಯಲ್ಲಿ ಪದ್ಮಾವತಿ ದೇವಸ್ಥಾನದ ಧರ್ಮದರ್ಶಿ ರಾಮ ನಾಯ್ಕ ಹಾಗೂ ಪದ್ಮಾವತಿ ನಾಯ್ಕ ಕುಟುಂಬದವರು, ಗಂಗಾಧರ ನಾಯ್ಕ, ವೆಂಕಟೇಶ ನಾಯ್ಕ ಆಸರಕೇರಿ, ರಾಧಾಕೃಷ್ಣ ಪ್ರಭು, ಶ್ರೀಧರ್ ಎಸ್. ನಾಯ್ಕ, ಎಂ. ಎಸ್. ನಾಯ್ಕ, ಮಂಜುನಾಥ ದೇವಾಡಿಗ, ನಾಗೇಂದ್ರ ಆಚಾರ್ಯ, ಅಶೋಕ್ ಆಚಾರ್ಯ, ಸುರೇಶ ನಾಯ್ಕ, ದಿನೇಶ್ ನಾಯ್ಕ, ಚಂದ್ರು ನಾಯ್ಕ, ಸುಬ್ರಾಯ ನಾಯ್ಕ, ರಾಘು ನಾಯ್ಕ, ಮೋಹನ ನಾಯ್ಕ, ತಿಮ್ಮಪ್ಪ ನಾಯ್ಕ, ಸುಧಾಕರ ನಾಯ್ಕ, ಮಾದೇವ ಮೊಗೇರ್, ಕೇಶವ ನಾಯ್ಕ, ಗಿರೀಶ ನಾಯ್ಕ, ಅನೂಪ್ ಶೇಟ್, ಪ್ರಣವ್, ಶಶಿಧರ್, ನಕುಲ ನಾಯ್ಕ ಹಾಗೂ ನೂರಾರು ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net