ಚಂಡಿಕೇಶ್ವರಿ ಅಮ್ಮನವರ ರಥೋತ್ಸವ

koppa ratha
ಕೊಪ್ಪ ತಾಲೂಕು ನಾರ್ವೆ ಚಂಡಿಕೇಶ್ವರಿ ಅಮ್ಮನವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
Published on

ಕೊಪ್ಪ: ನರಸೀಪುರ ಗ್ರಾಮ ಪಂಚಾಯಿತಿ ನಾರ್ವೆ ಚಂಡಿಕೇಶ್ವರಿ ಅಮ್ಮನವರ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು.

ಬೆಳಗ್ಗೆ ವಿಶೇಷ ಪೂಜೆ ನೆರವೇರಿತು. ದೇವರಿಗೆ ಹೂವಿನ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಹಣ್ಣು ಕಾಯಿ ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು. ಮಧ್ಯಾಹ್ನ ಮನ್ಮಹಾರಥಾರೋಹಣ ನೆರವೇರಿತು. ಭಕ್ತರು ದವಸ, ಧಾನ್ಯಗಳನ್ನು ರಥಕ್ಕೆ ಎರಚಿ ಜಯಘೋಷದೊಂದಿಗೆ ರಥ ಎಳೆದರು. ಸಂಜೆ ದುಗ್ಗಳ ಉತ್ಸವ ನಡೆಯಿತು.
ಮಂಗಳವಾರ ಕುಂಕುಮೋತ್ಸವ, ತುಂಗಾ ನದಿಯಲ್ಲಿ ಅವಭೃತಸ್ನಾನ, ಸಂಜೆ ಪಲ್ಲಕ್ಕಿ ಉತ್ಸವ ನಡೆಯಿತು. ಮೇ 1ರಂದು ಬೆಳಗ್ಗೆ 10 ಗಂಟೆಗೆ ಸಾಮೂಹಿಕ ಸತ್ಯನಾರಾಯಣ ವ್ರತ, ಸಂಪ್ರೋಕ್ಷಣೆ, ತುಲಾಭಾರ, ಧ್ವಜಾರೋಹಣ, ಸಂಜೆ ಉತ್ಸವ ನಡೆಯಲಿದೆ. 2ರಂದು ಮಧ್ಯಾಹ್ನ 12 ಗಂಟೆಗೆ ಮಹಾ ಮಂಗಳಾರತಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net