ಶಿಬಾರಗಟ್ಟಿ ಬಸವಣ್ಣ ದೇವರ ಸಂಭ್ರಮದ ರಥೋತ್ಸವ

upbr -Rathotsava
Published on

ಉಪ್ಪಿನಬೆಟಗೇರಿ: ಸಮೀಪದ ಶಿಬಾರಗಟ್ಟಿ ಗ್ರಾಮದ ಬಸವಣ್ಣ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಬಸವೇಶ್ವರರ ರಥೋತ್ಸವ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

ಬುಧವಾರ ಬೆಳಗ್ಗೆ ಬಸವಣ್ಣ ದೇವರ ಮೂರ್ತಿಗೆ ಅರ್ಚಕರಿಂದ ರುದ್ರಾಭಿಷೇಕ ಸಹಿತ ವಿವಿಧ ಪೂಜಾ ಕಾರ್ಯಗಳು ನೆರವೇರಿದವು. ಮಧ್ಯಾಹ್ನ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಸಂಜೆ 5ಕ್ಕೆ ದೇವಸ್ಥಾನದಿಂದ ಆರಂಭವಾದ ಶ್ರೀ ಬಸವೇಶ್ವರರ ರಥೋತ್ಸವ ವಿಠ್ಠಲ ದೇವಸ್ಥಾನದವರೆಗೆ ತೆರಳಿ ಮೂಲ ಸ್ಥಳಕ್ಕೆ ಆಗಮಿಸಿತು. ರಥೋತ್ಸವದಲ್ಲಿ ಭಕ್ತರು ಪಾಲ್ಗೊಂಡು ಉತ್ತತ್ತಿ, ಬಾಳೆಹಣ್ಣು, ಲಿಂಬೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net