ಕೋದಂಡರಾಮ ದೇವಾಲಯದಲ್ಲಿ ರಥೋತ್ಸವ

ಕೋದಂಡರಾಮ ದೇವಾಲಯದಲ್ಲಿ ರಥೋತ್ಸವ
Published on

ಅರಕಲಗೂಡು: ಪಟ್ಟಣದಲ್ಲಿ ಬುಧವಾರ ಶ್ರೀರಾಮ ನವಮಿಯನ್ನು ಜನರು ಸಂಭ್ರಮದಿಂದ ಆಚರಿಸಿದರು. ಕೋಟೆ ಕೋದಂಡರಾಮ ದೇವಾಲಯದಲ್ಲಿ ಶ್ರೀರಾಮರಥೋತ್ಸವ ನಡೆಯಿತು.

ದೇವಾಲಯದಲ್ಲಿ ಬೆಳಗ್ಗೆ ಮೂಲವಿಗ್ರಹಕ್ಕೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು ಬಳಿಕ ಉತ್ಸವ ಮೂರ್ತಿಗಳನ್ನು ಅಲಂಕರಿಸಿದ ರಥದಲ್ಲಿ ಪ್ರತಿಷ್ಠಾಪಿಸಿ ವಿವಿಧ ಧಾರ್ಮಿಕ ಕೈಂಕರ್ಯ ನಡೆಸಿದ ಬಳಿಕ ನೆರೆದಿದ್ದ ಭಕ್ತರು ರಥಬೀದಿಯಲ್ಲಿ ತೇರನ್ನು ಎಳೆದು ಸಂಭ್ರಮಿಸಿದರು.

ರಥ ಸ್ವಸ್ಥಾನ ಸೇರಿದ ಬಳಿಕ ಸಾಮೂಹಿಕ ಭಜನೆ, ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು. ರಾತ್ರಿ ಶಾಂತೋತ್ಸವ ನಡೆಸಲಾಯಿತು. ಪಟ್ಟಣದ ವಿವಿಧೆಡೆ ಜನರಿಗೆ ಪಾನಕ, ಮಜ್ಜಿಗೆ ವಿತರಿಸಲಾಯಿತು. ಕೋದಂಡರಾಮ ದೇವಾಲಯದಲ್ಲಿ ಗುರುವಾರ ಶ್ರೀ ರಾಮ ಪಟ್ಟಾಭಿಷೇಕ ಮಹೋತ್ಸವ ನೆರವೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net