ಹುಲುಕುಡಿ ಜಾತ್ರಾ ಮಹೋತ್ಸವ

ರಥೋತ್ಸವ
ರಥೋತ್ಸವ
Published on

ದೊಡ್ಡಬೆಳವಂಗಲ: ಹೋಬಳಿಯ ಶ್ರೀ ಹುಲುಕುಡಿ ವೀರಭದ್ರಸ್ವಾಮಿ ಪ್ರಸನ್ನಭದ್ರಕಾಳಮ್ಮ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.
ಮಧ್ಯಾಹ್ನ 2.30ಕ್ಕೆ ಶ್ರೀ ಅಭಿನವ ಸಿದ್ದಲಿಂಗಶಿವಾಚಾರ್ಯಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಸಾವಿರಾರು ಭಕ್ತರು ರಥಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥನೆ ಸಲ್ಲಿಸಿದರು. ಮಾಜಿ ಶಾಸಕ ವೆಂಕಟರಮಣಯ್ಯ ಅನ್ನಸಂತರ್ಪಣೆ ಆಯೋಜಿಸಿದ್ದರು.ಸಮಾಜ ಸೇವಕ ಶಾಕಲದೇವನಪುರದ ಹರೀಶ್‌ಗೌಡ ಹಾಗೂ ಸಂಗಡಿಗರು ಜಾತ್ರೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಉಸ್ತುವಾರಿ ವಹಿಸಿಕೊಂಡಿದ್ದರು. ಮುಖಂಡ ಬಿ.ಸಿ.ಆನಂದ್ ಜನರಿಗೆ ಮಜ್ಜಿಗೆ ವಿತರಿಸಿದರು. ದೊಡ್ಡಬೆಳವಂಗಳ ಠಾಣೆ ಪೊಲೀಸರು ಬಂದೋಬಸ್ತ್ ನೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net