

ಶಶಿಧರ ಎಂ.ಪಾಟೀಲ ಕೋ.ಶಿವಾಪುರ
ನಾಡಿನ ಅನೇಕ ಮಹಾತ್ಮರ ಪಾದ ಸ್ಪರ್ಶದಿಂದ ಯರಗಟ್ಟಿ ತಾಲೂಕಿನ ಕೋಟೂರ ಶಿವಾಪುರ ಸುೇತ್ರವಾಗಿದೆ. ಅಂತಹ ಪುಣ್ಯಭೂಮಿಯ ಹಿರೇಮಠದಲ್ಲಿ ಮೇ 12ರಂದು ಚರಂತಯ್ಯ ದೇವರ ಪಟ್ಟಾ-ಧಿಕಾರ ಮಹೋತ್ಸವ ನೆರವೇರಲಿದ್ದು, ಗ್ರಾಮದಲ್ಲಿ ಸಂಭ್ರಮ ಕಳೆಗಟ್ಟಿದೆ.
ಗ್ರಾಮದಲ್ಲಿ ಐತಿಹಾಸಿಕ ಶ್ರೀ ಪರಮಾನಂದ ದೇವಸ್ಥಾನ ಭಕ್ತರ ಆರಾಧ್ಯ ದೈವವಾಗಿದೆ. ಇಲ್ಲಿನ ಹಿರೇಮಠ ಪುರಾತನ ಕಾಲದಿಂದಲೂ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ದಾಸೋಹ ಕೈಂಕರ್ಯ ಕೈಗೊಂಡು ಅಪಾರ ಭಕ್ತ ಗಣ ಹೊಂದಿದೆ.
ಹಲವು ದಶಕಗಳಿಂದ ಹಿರೇಮಠಕ್ಕೆ ಪೀಠಾಧಿಪತಿ ಇಲ್ಲದ ಕೊರಗು ಭಕ್ತರದ್ದಾಗಿತ್ತು. ಹೀಗಾಗಿ, ಭಕ್ತರ ಬೇಡಿಕೆ, ಉಜ್ಜಯಿನಿ ಪೀಠದ ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಜಗದ್ಗುರುಗಳ ಅಪ್ಪಣೆ ಮೇರೆಗೆ ಬಾಗೋಜಿಕೊಪ್ಪದ ಶಿವಲಿಂಗ ಮುರರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಹಾಗೂ ಬಸಯ್ಯ ಅಜ್ಜನವರ ಮಾರ್ಗದರ್ಶನದಲ್ಲಿ ಹಿರೇಮಠಕ್ಕೆ ಶ್ರೀ ಚರಂತಯ್ಯ ದೇವರ ಪಟ್ಟಾ-ಧಿಕಾರ ಮಹೋತ್ಸವ ಜರುಗಲಿದೆ.
ಚರಂತಯ್ಯ ದೇವರ ಕಿರು ಪರಿಚಯ: ಚರಂತಯ್ಯ ದೇವರು 1998 ಮಾರ್ಚ್ 9ರಂದು ಕೋ.ಶಿವಾಪುರದಲ್ಲಿ ಸಂಗಯ್ಯ&ಸುಮಿತ್ರಮ್ಮ ಹಿರೇಮಠ ದಂಪತಿ ಪುಣ್ಯ ಉದರದಲ್ಲಿ ಜನಿಸಿದರು. ಎಂಎ, ಬಿ.ಇಎಡ್ ಪದವಿ ಪಡೆದು ಮುರಗೋಡ ಮಹಾಂತೇಶ್ವರ, ಬಾಳೆಹೂನ್ನೂರ ಗುರುಕುಲದಲ್ಲಿ ಸಂಸ್ಕ್ರತ, ಜ್ಯೋತಿಷ ಶಾಸ್ತ್ರ ಅಧ್ಯಯನ ಮಾಡಿದ್ದಾರೆ.
ಗ್ರಾಮದಲ್ಲಿ ಕಳೆಗಟ್ಟಿದ ಸಂಭ್ರಮ: ಚರಂತಯ್ಯ ದೇವರ ಪಟ್ಟಾ-ಧಿಕಾರ ಮಹೋತ್ಸವ ಹಿನ್ನಲೆಯಲ್ಲಿ ಗ್ರಾಮದ ಮನೆ&ಮನಗಳಲ್ಲಿ ಸಂಭ್ರಮ ಇಮ್ಮಡುಗೊಂಡಿದೆ. ಪ್ರತಿ ಓಣಿಗಳಲ್ಲಿ ತಳೀರು ತೋರಣ ರಾರಾಜಿಸುತ್ತಿದ್ದು, ಮನೆಯಂಗಳದಲ್ಲಿ ವರ್ಣರಂಜಿತವಾಗಿ ಮೂಡಿದ ರಂಗೋಲಿ ಎಲ್ಲರನ್ನು ಸ್ವಾಗತಿಸುತ್ತಿವೆ.
ವಿವಿಧ ಕಾರ್ಯಕ್ರಮ: ಮೇ 11ರಂದು ಸಂಜೆ 7 ಗಂಟೆಗೆ ಸುಮಂಗಲೆಯರ ಕುಂಭ, ಆರತಿ, ದೀಪೋತ್ಸವದೂಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉಜ್ಜಯಿನಿ ಪೀಠದ ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಜರುಗಲಿದೆ. ಗಚ್ಚಿನ ಹಿರೇಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ, ಗುರುಶಾಂತೇಶ್ವರ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ ಆಗಮಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಜಗದೀಶ ಶಟ್ಟರ್, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಸಿ.ಸಿ.ಪಾಟೀಲ, ರಮೇಶ ಜಾರಕಿಹೊಳಿ, ಎಂಎಲ್ಸಿ ಹನುಮಂತ ನಿರಾಣಿ, ಮಾಜಿ ಶಾಸಕ ಡಾ.ವಿ.ಐ.ಪಾಟೀಲ, ಮುಖಂಡ ವಿರೂಪಾ ಮಾಮನಿ ಪಾಲ್ಗೊಳ್ಳಲಿದ್ದಾರೆ.
ಮೇ 12 ರಂದು ಬೆಳಗ್ಗೆ 7 ಗಂಟೆಗೆ ಉಜ್ಜಯಿನಿ ಪೀಠದ ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಶಿವಲಿಂಗ ಮುರರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಚರಂತಯ್ಯ ದೇವರಿಗೆ ಗುರು ಪಟ್ಟಾಧಿಕಾರ ನೆರವೇರಿಸುವರು. ಪಟ್ಟಬಂದನ, ಮುದ್ರಾಉಂಗುರ, ಮುದ್ರಾಬಟ್ಟಲ, ದಂಡಕಮಂಡಲ, ಮಂತ್ರೋಪದೇಶ ಪೂರ್ವಕವಾಗಿ ಅ-ಧಿಕಾರ ನೀಡಿ ಜಡೆತಲೆ ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ ಎಂದು ಅಭಿದಾನ ಅನುಗ್ರಹಿಸುವರು.
ಸಚಿವರಾದ ಸತೀಶ ಜಾರಕಿಹೋಳಿ, ಲ$್ಮ ಹೆಬ್ಬಾಳ್ಕರ್, ಶಾಸಕರಾದ ವಿಶ್ವಾಸ ವೈದ್ಯ, ಅಶೋಕ ಪಟ್ಟಣ, ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ ಮುಖಂಡರಾದ ಆರ್.ವಿ.ಪಾಟೀಲ, ಅಶೋಕ ಪೂಜಾರಿ ಗಣ್ಯರು ಪಾಲ್ಗೊಳ್ಳುವರು.
ಮುಂದಿನ ದಿನಗಳಲ್ಲಿ ಶಿಣ ೇತ್ರದಲ್ಲಿ ಕ್ರಾಂತಿ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ
ಧ್ಯೇಯವಾಗಿದೆ.
> ಚರಂತಯ್ಯ ಪಟ್ಟದೇವರು
ಗ್ರಾಮದಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮ ನಿರಂತರವಾಗಿ ನಡೆಯಲಿ. ಎಲ್ಲರನ್ನೂ ಒಗ್ಗ್ಗೂಡಿಸುವ ಪ್ರವಚನ ಸೇರಿ ವಿವಿಧ ಧಾರ್ಮಿಕ ಮಠದಲ್ಲಿ ನಡೆಯಲಿ. ಶ್ರೀಗಳ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುನ್ನಡೆಯೋಣ
> ಸಿದ್ದಲಿಂಗ ಯಲ್ಲಪ್ಪ ಕುಂದರಗಿ, ಯುವ ಧುರೀಣ
ಕೋ.ಶಿವಾಪುರದಲ್ಲಿ ಚರಂತಯ್ಯ ದೇವರ ಪಟ್ಟಾಧಿಕಾರ ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆದಿವೆ. ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಸತ್ಕಾರ್ಯದಲ್ಲಿ ಭಾಗಿಯಾಗಿ ಪುನೀತರಾಗಬೇಕು.
> ಬಸಯ್ಯ ಹಿರೇಮಠ, ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ಸಮಿತಿ ಮಾಜಿ ಅಧ್ಯ