ವಿದ್ಯಾರ್ಥಿಗಳಿಗೆ ಚರಕ ನೂಲುವಿಕೆ ಕಾರ್ಯಾಗಾರ

mng-31jan-charaka (2)
Published on



ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್(ಇಂಟಾಕ್)ನ ಮಂಗಳೂರು ಘಟಕೆ ವತಿಯಿಂದ ದ.ಕ. ಜಿಲ್ಲಾ ಪಂಚಾಯಿರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಂಧಿನಗರ ಇದರ ಸಹಯೋಗದಲ್ಲಿ ‘ ಚರಕದೊಂದಿಗೆ
ಒಂದು ದಿನ ’ ಎಂಬ ಶೀರ್ಷಿಕೆಯಡಿ ಚರಕ ನೂಲುವಿಕೆ ಬಗ್ಗೆ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರವನ್ನು ಮೈಸೂರಿನ ಸಚ್ಚಿದಾನಂದ ಕೆ.ಜೆ. ಅವರು ಚರಕ ನೂಲುವಿಕೆಯ ಪರಿಚಯದೊಂದಿಗೆ ಪ್ರಾರಂಭಿಸಿದರು,
ಚರಕ ನೂಲುವುದು ಒಂದು ಸೂಕ್ಷ್ಮ ಪ್ರಕ್ರಿಯೆಯಾಗಿದ್ದು, ಸಂಪೂರ್ಣ ಏಕಾಗ್ರತೆಯ ಅಗತ್ಯವಿರುತ್ತದೆ. ಇದು ನಮ್ಮದೇ ಆದ ಉಡುಪುಗಳನ್ನು
ರಚಿಸಲು ಸಹಾಯ ಮಾಡುವುದಲ್ಲದೆ, ನಮ್ಮ ಗಮನಶೀಲತೆಯನ್ನು ಕೂಡ ಹೆಚ್ಚಿಸುತ್ತದೆೆ ಎಂದು ಅವರು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಸೌಮ್ಯ ಅವರು ಚರಕದ ಪರಿಸರಸ್ನೇಹಿ ಮತ್ತು ಸಾಂಸ್ಕೃತಿಕ ಮಹತ್ವ ತಿಳಿಸಿದರು.
ಇಂಟಾಕ್ ಮಂಗಳೂರು ವಿಭಾಗದ ಸಂಚಾಲಕ ಸುಭಾಸ್ ಚಂದ್ರ ಬಸು ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿ
ಅಧ್ಯಕ್ಷ ಮನೋಜ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಿದ್ಯಾರ್ಥಿಗಳನ್ನು ಗುಂಪುಗಳಾಗಿ ವಿಂಗಡಿಸಿ ಸಂಪನ್ಮೂಲ ವ್ಯಕ್ತಿಗಳು ತಂದ 10 ಪೋರ್ಟಬಲ್ ಚರಕಗಳಲ್ಲಿ ನೂಲುವುದನ್ನು ಅಭ್ಯಾಸ ಮಾಡಲಾಯಿತು.
ಶಿಕ್ಷಕಿ ರಾಜೇಶ್ವರಿ ಅತಿಥಿಗಳನ್ನು ಪರಿಚಯಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶರ್ಮಿಳಾ ಡಿಸೋಜಾ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net