ಅಕ್ಷರ ಕಲಿಸುವ ಶಿಕ್ಷಕರ ಸೇವೆ ಶ್ಲಾಘನೀಯ

26Ckd1
Published on

ಚಿಕ್ಕೋಡಿ: ವಿದ್ಯಾರ್ಥಿಗಳು ಗುರು ಹಿರಿಯರ ಹಾಗೂ ಪಾಲಕರ ಋಣ ತೀರಿಸಿದರೆ ಮಾತ್ರ ಗುರುವಂದನಾ ಕಾರ್ಯಕ್ರಮ ಸಾರ್ಥಕವಾಗುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಕೆ.ಎಂ.ಕಮತೆ ಹೇಳಿದರು.

ತಾಲೂಕಿನ ಅಂಕಲಿ ಗ್ರಾಮದ ಶಿವಾಲಯದಲ್ಲಿ ಕೆಎಲ್‌ಇ ಸಂಸ್ಥೆಯ ಶ್ರೀಮತಿ ಶಾರದಾದೇವಿ ಕೋರೆ ಪ್ರೌಢಶಾಲೆಯ 1997ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಶನಿವಾರ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸುವ ಜವಾಬ್ದಾರಿ ಶಿಕ್ಷಕರದ್ದಾಗಿದೆ. ಶಾಲೆಯ ಎಲ್ಲ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದರು.

ಉಪಪ್ರಾಚಾರ್ಯೆ ಜ್ಯೋತಿ ತಮಗೊಂಡಾ ಮಾತನಾಡಿ, ವಿದ್ಯಾರ್ಥಿಗಳು ತಾವು ಕಲಿತ ಶಾಲೆ ಹಾಗೂ ಕಲಿಸಿದ ಗುರುಗಳ ಸ್ಮರಣೆ ಮಾಡುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಕೆಎಲ್‌ಇ ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಹಳೇ ವಿದ್ಯಾರ್ಥಿಗಳು ಹಾಗೂ ದಾನಿಗಳು ನೀಡಿದ ಪ್ರೋತ್ಸಾಹವೇ ಕಾರಣ ಎಂದರು.

ಹಳೆಯ ವಿದ್ಯಾರ್ಥಿ ಶಿಕ್ಷಕ ಅರುಣ ಸಲಗರೆ ಮಾತನಾಡಿ, 28 ವರ್ಷಗಳ ಬಳಿಕ ನಾವೆಲ್ಲರೂ ಮರಳಿ ಗೂಡಿಗೆ ಎನ್ನುವ ಹೆಸರಿನಲ್ಲಿ

ಎಲ್ಲರೂ ಸೇರಿ ಗುರುವಂದನೆ ಸಲ್ಲಿಸಿರುವುದು ಸಂತಸ ತಂದಿದೆ ಎಂದರು.

ಹಳೇ ವಿದ್ಯಾರ್ಥಿಗಳಾದ ರಮೇಶ ಮನಗುತ್ತಿ, ಡಾ.ಜೀತೇಂದ್ರ ಖೋತ, ಸುಜಾತಾ ಜಕಾತೆ ಅನಿಸಿಕೆ ಹಂಚಿಕೊಂಡರು.

ಈಶ್ವರ ಬಡಿಗೇರ, ವಸಂತ ಸಮಾಜೆ, ಎಸ್.ಎಸ್.ಪಟ್ಟಣಶೆಟ್ಟಿ, ಕೆ.ಎಂ.ಮಲ್ಲನ್ನವರ, ಎ.ಬಿ.ಕೊರಬು, ಆರ್.ಬಿ.ಸವಾಟೆ, ಎಸ್.ಕೆ.ಹಲಕಾಟೆ, ಕುಮಾರ ಶಿಂಧೆ, ಅನೀಲ ಜಾಧವ, ಎಂ.ಬಿ.ಪಾಟೀಲ, ಟಿ.ಎನ್.ಮಾಳಿ, ಎಸ್.ಕೆ.ಮೇಟಿ, ರಾಜು ಬುಬನಾಳೆ, ರಾಜು ಸುತಾರ, ಶ್ರೀನಿವಾಸ ಪೋತದಾರ, ಮಹಾದೇವ ಖಡ್ಡನ್ನವರ, ಅಪ್ಪಾಸಾಹೇಬ ಖೋತ, ಸತ್ತೆಪ್ಪ ಖೋತ, ಗಣೇಶ ಗುಂಡಕಲ್ಲೆ, ಅನೀಲ ತಾವದಾರೆ, ವಿನಾಯಕ ಶಾಮನ್ನವರ, ಮಂಜುನಾಥ ಕೆಂಗಾನೂರ, ಉಮೇಶ ಮೇದಾರ, ರಾಜು ಖೋತ, ಅಮಿತ ಕೋಳಿ, ಹೇಮಾ ಗದ್ದಿಹಳ್ಳಿ, ಸಂಗೀತಾ ಕೊಕಣೆ, ಲಕ್ಷ್ಮೀ ಕಾಂತೆ, ಲಕ್ಷ್ಮೀ ಬುರಗೆ, ಲತಾ ಕೋಳಿ, ಲೀನಾ ಕಮಲಾಕರ, ಭಾರತಿ ಖೋತ, ಅನಿತಾ ದನವಾಡೆ, ವಿಲಾಸ ದನವಾಡೆ ಇತರರಿದ್ದರು.

ದಾದಾ ನದ್ಾ ಸ್ವಾಗತಿಸಿದರು. ಮಹಾದೇವ ಡೋಣವಾಡೆ ಹಾಗೂ ಸಂಜಯ ವಡೇರ ನಿರೂಪಿಸಿದರು. ಸಂಪದಾ ನಾಟೇಕರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net