

ಕಟಕೋಳ: ಕ್ರೀಡೆ ಕೇವಲ ಪದಕ ಮತ್ತು ಪ್ರಶಸ್ತಿ ಸಂಪಾದನೆಗೆ ಸೀಮಿತವಲ್ಲ. ನಮ್ಮ ಬದುಕು ರೂಪಿಸಿಕೊಳ್ಳಲು ಸಹ ಅನುಕೂಲವಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ನಿವತ್ತ ರಿಜಿಸ್ಟ್ರಾರ್ ಸುಂದರ ರಾಜ್ ಅರಸ್ ಹೇಳಿದರು.
ಸಮೀಪದ ಚಂದರಗಿಯ ಎಸ್.ಎಂ. ಕಲೂತಿ ಸಂಯುಕ್ತ ಕ್ರೀಡಾವಸತಿ ಮಹಾವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ರೀಡಾಪಟುಗಳಿಗೆ ಸೋಲು, ದು@ಖ ಸಾಮಾನ್ಯ. ಆದರೆ, ಪರಿಶ್ರಮ, ತ್ಯಾಗ, ಸಮರ್ಪಣಾ ಭಾವ ಅಳವಡಿಸಿಕೊಂಡರೆ ಸಾಧನೆ ನಿಲುಕುತ್ತದೆ. ಉತ್ತಮ ವಾತಾವರಣ, ಸೂಕ್ತ ತರಬೇತಿ ಮತ್ತು ಸತ್ವಭರಿತ ಊಟ ನೀಡಿ ಕ್ರೀಡಾಪಟುಗಳನ್ನು ಹುಟ್ಟು ಹಾಕುವ ಚಂದರಗಿ ಶಾಲೆ ದೇಶಕ್ಕೆ ಶ್ರೇಷ್ಠ ಕೊಡುಗೆ ನೀಡುತ್ತಿದೆ ಎಂದು ಶ್ಲಾಘಿಸಿದರು.
ಸ್ಪೋಕೋ ಸಂಸ್ಥೆಯ ಸಂಸ್ಥಾಪಕ ಎಸ್.ಎಂ. ಕಲೂತಿ, ಧಾರವಾಡದ ನಿವತ್ತ ದೆಹಿಕ ಶಿಣ ನಿರ್ದೇಶಕ ವಿ.ಟಿ. ಕುರ್ತಕೋಟಿ, ಆರ್. ಕೆ. ಪಡತಾರೆ, ಎಂ.ಜಿ. ಮರನೂರ, ವ್ಯವಸ್ಥಾಪಕ ಜೆ.ಬಿ. ಮೇಟಿ, ಜೆ.ವಿ. ಮುರಗೋಡ, ಪ್ರಾಚಾರ್ಯರಾದ ಸತೀಶ ಪಾಟೀಲ, ಪಿ.ಕೆ. ಪಾಟೀಲ, ಐ.ಎಸ್. ಸೂಳಿಭಾವಿ ಹಾಗೂ ಮುಖ್ಯ ತರಬೇತುದಾರ ಗೋಪಾಲ ಅಪ್ಪಿನಬೆಲ್, ಶಿಕಿ ರಶ್ಮಿ ಗೌಡರ ಇತರರಿದ್ದರು.