ಶಿಕ್ಷಣ ಮಹತ್ವ ಸಾರುವ ಬೀದಿನಾಟಕ

MKG1B
Published on

ನ್ಯಾಮತಿ:ತಾಲೂಕಿನ ಸೋಗಿಲು ಗ್ರಾಮದಲ್ಲಿ ಮಂಗಳವಾರ ಶಿಕ್ಷಣದ ಮಹತ್ವ ಕುರಿತು ಬೀದಿ ನಾಟಕದ ಮೂಲಕ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಜಿಲ್ಲಾಡಳಿತ, ಜಿಪಂ, ವಯಸ್ಕರ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸಾಕ್ಷರತೆ ಜಾಗೃತಿ ಜಾಥಾ ಹಳ್ಳಿ ಹಳ್ಳಿಗಳಲ್ಲಿ ಅಕ್ಷರ ಅರಿವು ಕಾರ್ಯಕ್ರಮದಡಿ ಹೊನ್ನಾಳಿಯ ರೂಪಶ್ರೀ ಕಲಾ ತಂಡ ಕಲಾವಿದರು ಬೀದಿ ನಾಟಕದ ಮೂಲಕ ಶಿಕ್ಷಣದ ಕುರಿತಾದ ಜಾಗೃತಿ ಮೂಡಿಸಿದರು.

ನೇತೃತ್ವ ವಹಿಸಿದ್ದ ಮಲ್ಲಿಕಾರ್ಜುನ ಸ್ವಾಮಿ, ಐರಣಿ ಚಂದ್ರು, ಕುಕ್ಕುವಾಡ ಮಹಾಂತೇಶ್, ಬಾನಪ್ಪ ಅವರಗೆರೆ, ರುದ್ರೇಶ್ ಲೋಕಿಕೆರೆ, ಶಾಂಭವಿ ಹರಿಹರ, ಪುರಂದರ್ ಲೋಕಿಕೆರೆ, ರಾಜಶೇಖರ ಹೊನ್ನಾಳಿ ಅವರು ಶಿಕ್ಷಣ ಸಂದೇಶ ಸಾರುವ ಪಾತ್ರಗಳನ್ನು ನಿರ್ವಹಿಸಿ ಜನರ ಮನ ಮುಟ್ಟುವಂತೆ ಶಿಕ್ಷಣದ ಮಹತ್ವ ತಿಳಿಸಿದರು.

ಗ್ರಾಮದ ಶಾಲೆ ಮುಖ್ಯಶಿಕ್ಷಕ ಪರಮೇಶ್ವರ್, ಶಿಕ್ಷಕರಾದ ಪ್ರಭು, ಮೀನಾಕ್ಷಿ, ಲತಾ, ಅಂಗನವಾಡಿ ಕಾರ್ಯಕರ್ತೆ ಗೀತಾ, ಆಶಾ, ಗಂಗಮ್ಮ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net