ಚಾರ ರಸ್ತೆ ಸಂಚಾರ ಹರಸಾಹಸ

pathols
ತೀವ್ರ ಹದಗೆಟ್ಟಿರುವ ಹೆಬ್ರಿ- ಕುಂದಾಪುರ ಸಂಪರ್ಕಿಸುವ ರಸ್ತೆ.
Published on

ನರೇಂದ್ರ ಎಸ್ ಮರಸಣಿಗೆ ಹೆಬ್ರಿ

ಹೆಬ್ರಿ ಹಾಗೂ ಕುಂದಾಪುರ ಸಂಪರ್ಕಿಸುವ ಮೂರು ರಸ್ತೆಯಿಂದ ಚಾರದ ತನಕ ರಸ್ತೆ ತೀವ್ರ ಹದಗೆಟ್ಟಿದೆ. ಕೆಲವೆಡೆ ಜಲ್ಲಿ ಕಿತ್ತುಹೋಗಿದ್ದು, ವಾಹನಗಳು ಸ್ಕಿಡ್ ಆಗುತ್ತಿವೆ.

ಮೂರು ರಸ್ತೆ, ಮೆಸ್ಕಾಂ ಸಮಿಪ, ಪಂಚಾಯಿತಿ ಮುಂಭಾಗ, ನಾಗಬ್ರಹ್ಮ ಸ್ಥಾನದ ಬಳಿ ರಸ್ತೆ ಸ್ಥಿತಿ ಶೋಚನೀಯವಾಗಿದೆ. ದೀಪಾವಳಿ ಬಳಿಕ ರಸ್ತೆ ದುರಸ್ತಿ ಆರಂಭಿಸುವ ಕುರಿತು ಲೋಕೊಪಯೋಗಿ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದು, ದೀಪಾವಳಿ ಕಳೆದು ಎರಡು ವಾರ ಕಳೆದರೂ ಕೆಲಸ ಇನ್ನೂ ಆರಂಭವಾಗಿಲ್ಲ.

ಹಲವೆಡೆ ತಾತ್ಕಾಲಿಕ ದುರಸ್ತಿ ಮಾಡಿದ್ದು, ತೇಪೆ ಹಾಕುವ ಮೂಲಕ ಕಳಪೆ ಕಾಮಗಾರಿ ನಡೆಸಲಾಗಿದೆ. ಇದು ಮತ್ತೊಮ್ಮೆ ಹದಗೆಡಲಾರಂಭಿಸಿದ್ದು, ಅಪಘಾತಗಳು ಇಲ್ಲಿ ಸರ್ವೇ ಸಾಮಾನ್ಯವಾಗುತ್ತಿವೆ. ಅಲ್ಲದೇ ಹೊಂಡಗಳಿಗೆ ಮಣ್ಣು ಸುರಿದಿರುವುದುರಿಂದ ಅಲ್ಲಲ್ಲಿ ಧೂಳು ಎದ್ದಿದ್ದು, ಸಂಚಾರ ಸಂದರ್ಭ ವಾಹನ ಚಲಾಯಿಸುವವರಿಗೆ ಸಮಸ್ಯೆಯಾಗುತ್ತಿದೆ.

ಚಾರದ ಜನರು ಶೀಘ್ರವೇ ರಸ್ತೆಗಳ ದುರಸ್ತಿಗೆ ಲೋಕೊಪಯೋಗಿ ಇಲಾಖೆ ಅಧಿಕಾರಿಗಳ ಸಹಿತ ಸರ್ಕಾರವನ್ನು ಒತ್ತಾಯಿಸಿದ್ದು, ತಪ್ಪಿದಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅಸಮರ್ಪಕ ಚರಂಡಿ

ರಸ್ತೆಯ ಇಕ್ಕೆಲಗಳಲ್ಲಿರುವ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ಸಮಸ್ಯೆ ಎದುರಾಗಿದೆ. ಚರಂಡಿಯಲ್ಲಿ ಸೂಕ್ತವಾಗಿ ನೀರು ಹರಿಯದೆ ರಸ್ತೆಯ ಮೇಲೆ ಸಂಗ್ರಹಗೊಳ್ಳುತ್ತಿದ್ದು, ಪರಿಣಾಮ ರಸ್ತೆ ಕೆಡಲು ಕಾರಣ.

ಹೆಬ್ರಿ ಪೇಟೆಯಲ್ಲೂ ಹೊಂಡಗಳು

ಹೆಬ್ರಿ ಪೇಟೆಯ ರಸ್ತೆಯಲ್ಲೂ ಅನೇಕ ಕಡೆಯಲ್ಲಿ ಗುಂಡಿಗಳಿವೆ. ಬೃಹತ್ ಗಾತ್ರದ ಗುಂಡಿಗಳು ಸವಾರರ ಪ್ರಾಣಕ್ಕೆ ಕುತ್ತು ತರುವ ಅಪಾಯವಿದೆ. ಜನರ ಕಣ್ಣೊರೆಸುವ ತಂತ್ರದಂತೆ ಮಳೆಗಾಲ ಸಮೀಪಿಸಿದಾಗ ಕಳಪೆ ಮಟ್ಟದ ತೇಪೆ ಹಾಕುತ್ತಲೇ ಇರುತ್ತಾರೆ ಹೊರತು ಶಾಶ್ವತ ಮುಕ್ತಿಗಾಗಿ ಕಾರ್ಯನಿರ್ವಹಿಸುದಿಲ್ಲ ಎನ್ನುತ್ತಾರೆ ನಾಗರಿಕರು.

ಸತತ ಮಳೆಯಿಂದ ರಸ್ತೆಯ ದುರಸ್ತಿ ಅಸಾಧ್ಯವಾಗಿದೆ. ಸಂಬಂಧಪಟ್ಟ ವಿಭಾಗಕ್ಕೆ ಶೀಘ್ರವೇ ರಸ್ತೆ ದುರಸ್ತಿ ಆರಂಭಿಸುವಂತೆ ಸೂಚನೆ ನೀಡಲಾಗಿದೆ. ಹೆಬ್ರಿಯಲ್ಲೂ ಕೆಲಸ ರಂಭಿಸಲಾಗುವುದು . -ತ್ರಿನೇಶ್ವರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಾರ್ಕಳ. ರಸ್ತೆ ದುರಸ್ತಿಗೆ ಸಂಬಂಧಿಸಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸತತ ಅಪಘಾತಗಳು ನಡೆದಿದ್ದು, ಈ ರಸ್ತೆ ಬಹುಬೇಗನೆ ದುರಸ್ತಿಗೊಳ್ಳಬೇಕು. ಹಲವೆಡೆ ಕಾರ್ಯಾರಂಭವಾಗಿದೆ. -ದಿನೇಶ್ ಶೆಟ್ಟಿ ಹುತ್ತುರ್ಕೆ, ಚಾರ ಗ್ರಾಪಂ ಅಧ್ಯಕ್ಷ https://www.vijayavani.net/hattiangadi-school-runner-up-in-basketball https://www.vijayavani.net/inaugurate-annual-games

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net