ಧರ್ಮಗುರುಗಳಿಗೆ ಬೇಕಿದೆ ರಕ್ಷಣೆ

21ckd1.jpg
Published on

ಚಿಕ್ಕೋಡಿ: ಹಿರೇಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಹಿನ್ನೆಲೆಯಲ್ಲಿ ನಂದಿಪರ್ವತಕ್ಕೆ ಅಲ್ಪಸಂಖ್ಯಾತರ ಆಯೋಗದ ಸದಸ್ಯ ಧನ್ಯಕುಮಾರ ಗುಂಡೆ ಅವರು ಜೈನ ಸಮುದಾಯದ ಮುಖಂಡರೊಂದಿಗೆ ಶುಕ್ರವಾರ ಭೇಟಿ ನೀಡಿ, ಆಶ್ರಮದ ಸದಸ್ಯರು ಹಾಗೂ ನಂದಿ ಮಹಾರಾಜರ ಪೂರ್ವಾಶ್ರಮದ ಸಹೋದರರಿಗೆ ಸಾಂತ್ವನ ಹೇಳಿದರು.

ಮಹಾರಾಜರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಗುಂಡೆ, ಜೈನಮುನಿಗಳ ಹತ್ಯೆ ಪ್ರಕರಣ ರಾಜಕೀಯ ತಿರುವು ಪಡೆದಿದ್ದಕ್ಕೆ ವಿಷಾದ ವ್ಯಕ್ತಪಡಿಸಿದರು. ಈ ರೀತಿಯ ಘಟನೆ ದೇಶದಲ್ಲಿ ಹಿಂದೆಂದೂ ಆಗಿಲ್ಲ. ಅಷ್ಟರಮಟ್ಟಿಗೆ ಮನುಷ್ಯನ ಮನಸ್ಸು ವಿಕಾರಗೊಂಡಿದ್ದು ವಿಚಿತ್ರವಾಗಿದೆ. ವಿಚಾರ ವಿಷಯಾಂತರ ಮಾಡದೆ ನ್ಯಾಯ ಒದಗಿಸುವ ಕೆಲಸ ಆಗಲಿ. ಧರ್ಮಗುರುಗಳಿಗೆ ತೊಂದರೆ ಆಗದ ರೀತಿ ಎಚ್ಚರ ವಹಿಸಬೇಕಿರೋದು ದೇಶದ 125 ಕೋಟಿ ಜನರ ಕರ್ತವ್ಯ ಎಂದರು. ಎಸ್.ಟಿ.ಮುನ್ನೋಳ್ಳಿ, ಎ.ಜೆ.ಅಮ್ಮಣ್ಣವರ ಇದ್ದರು.

ಹಿರೇಕೋಡಿಯ ನಂದಿಪರ್ವತಕ್ಕೆ ಅಲ್ಪಸಂಖ್ಯಾತರ ಆಯೋಗದ ಸದಸ್ಯ ಧನ್ಯಕುಮಾರ ಗುಂಡೆ ಭೇಟಿ ನೀಡಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಿದರು. ಎಸ್.ಟಿ.ಮುನ್ನೋಳ್ಳಿ, ಎ.ಜೆ.ಅಮ್ಮಣ್ಣವರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net