ಎಸ್‌ಬಿಐ ಖಾನಾಪುರ ಶಾಖೆಯಲ್ಲಿ 1.61 ಕೋಟಿ ಅವ್ಯವಹಾರ

MONEY
Published on

ಬೆಳಗಾವಿ (ಖಾನಾಪುರ): ಕಳೆದ 2 ವರ್ಷಗಳ ಅವಧಿಯಲ್ಲಿ ನಿವೃತ್ತಿ ಹೊಂದಿದ ಖಾನಾಪುರ ತಾಲೂಕಿನ ವಿವಿಧ ಇಲಾಖೆಗಳ ನಿವೃತ್ತ ಸರ್ಕಾರಿ ನೌಕರರ ಪಿಂಚಣಿ ಹಣ ಪಾವತಿಯಲ್ಲಿ ಅವ್ಯವಹಾರ ಎಸಗಿದ ಆರೋಪದಡಿ ಶನಿವಾರ ಭಾರತೀಯ ಸ್ಟೇಟ್ ಬ್ಯಾಂಕ್‌ನ ಖಾನಾಪುರ ಶಾಖೆಯ ಸಿಬ್ಬಂದಿ ಹಾಗೂ ತಾಲೂಕಿನ ಚಾಪಗಾವ ಗ್ರಾಮದ ನಿವಾಸಿ ಮುಕುಂದ ಮಾದಾರ ಎಂಬುವರ ವಿರುದ್ಧ ಖಾನಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಖಾನಾಪುರ ತಾಲೂಕಿನ ನಿವೃತ್ತ ನೌಕರರು ತಮ್ಮ ಪಿಂಚಣಿ ಹಣ ಪಾವತಿಯಲ್ಲಿ ವಿಳಂಬ ಮಾಡಿದ ಎಸ್‌ಬಿಐ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್, ಜಿಲ್ಲಾಧಿಕಾರಿ ಹಾಗೂ ಸ್ಟೇಟ್ ಬ್ಯಾಂಕಿನ ಮುಖ್ಯ ಕಚೇರಿಗೆ ದೂರು ಸಲ್ಲಿಸಿದ್ದರು.

ನಿವೃತ್ತ ನೌಕರರು ದೂರು ಸಲ್ಲಿಸಿದ ಬಳಿಕ ಎಚ್ಚೆತ್ತುಕೊಂಡು ವಿಚಾರಣೆ ಕೈಗೊಂಡ ಸ್ಟೇಟ್ ಬ್ಯಾಂಕಿನ ವಿಭಾಗೀಯ ಅಧಿಕಾರಿಗಳಿಗೆ ನಿವೃತ್ತ ನೌಕರರ ಪಿಂಚಣಿ ಹಣ ಪಾವತಿಗಾಗಿ ಸರ್ಕಾರದಿಂದ ಎಸ್‌ಬಿಐ ಖಾತೆಗೆ ಸಂದಾಯವಾದ 1.61 ಕೋಟಿ ರೂ.ಹಣವನ್ನು ಆರೋಪಿ ಮುಕುಂದ ಸಂಬಂಧಿಸಿದ ಪಿಂಚಣಿದಾರರ ಖಾತೆಗೆ ಹಣ ಸಂದಾಯ ಮಾಡದೇ ಖಾಸಗಿ ಮಹಿಳೆಯೋರ್ವಳ ಖಾತೆಗೆ ಸಂದಾಯ ಮಾಡಿದ್ದು ಬೆಳಕಿಗೆ ಬಂದಿದೆ. ಖಾನಾಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net