ಅವ್ಯವಸ್ಥೆ ಅಧಿಕಾರಿಗಳಿಗೆ ತರಾಟೆ

1212
ಕೋಲಾರದ ಎಸ್​ಎನ್​ಆರ್​ ಆಸ್ಪತ್ರೆಗೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ್​ ಭಟ್​ ಭೇಟಿ ನೀಡಿದರು. ಎಸ್​.ಕೆ.ವೆಂಟಿಗೋಡಿ, ಡಾ.ನಯನಾ, ಡಾ.ಮಮತಾ ಇದ್ದರು.
Published on

ಕೋಲಾರ: ನಗರದ ಎಸ್​ಎನ್​ಆರ್​ ಆಸ್ಪತ್ರೆ, ಬಸ್​ ನಿಲ್ದಾಣ, ಕಾರಗೃಹ, ಸರ್ಕಾರಿ ವಸತಿ ನಿಲಯಗಳಿಗೆ ಗುರುವಾರ ಭೇಟಿ ನೀಡಿದ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ್​ ಭಟ್​ ಮತ್ತು ತಂಡ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಆಯ್ದ ಕಚೇರಿಗಳಿಗೆ ದಿಢೀರ್​ ಭೇಟಿ ನೀಡಿದ ತಂಡವು ಸ್ವಚ್ಛತೆ, ಇಲಾಖೆಯಿಂದ ಸೇವೆ ಕಲ್ಪಿಸುವುದು. ಹಾಸ್ಟ್ಟೆಲ್​ನಲ್ಲಿ ಊಟ, ತಿಂಡಿಯ ಶುಚಿ&ರುಚಿ, ಆಸ್ಪತ್ರೆಯಲ್ಲಿನ ವ್ಯವಸ್ಥೆ ಪರಿಶೀಲಿಸಿದರು.

ಆಸ್ಪತ್ರೆಯಲ್ಲಿ ಬೆಡ್​ ವ್ಯವಸ್ಥೆ ಮಾಡದೇ ಇರುವುದು, ಅಗತ್ಯ ಔಷಧಗಳ ಸರಬರಾಜು, ಶಸ್ತ್ರ ಚಿಕಿತ್ಸೆಗಾಗಿ ಬೇಕಾಗಿರುವ ಸಲಕರಣೆಗಳ ಸರಬರಾಜು, ರಕ್ತ ಪರೀಾ ಕೇಂದ್ರದಲ್ಲಿ ಪರೀೆಗಳ ಲಭ್ಯತೆ ಸೇರಿ ಹೀಗೆ ಹಲವು ವಿಷಯಗಳ ಕುರಿತು ಮಾಹಿತಿ ಪಡೆದುಕೊಂಡರು.

ಆಯೋಗದ ಸದಸ್ಯ ಎಸ್​.ಕೆ.ವೆಂಟಿಗೋಡಿ, ತಹಸೀಲ್ದಾರ್​ ಡಾ.ನಯನಾ, ಡಿ.ಎಸ್​.ಡಾ.ಮಮತ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್​ ಇದ್ದರು.

ಬೆಡ್​ ನೀಡದೆ ರ್ನಿಲಕ್ಷ್ಯ: ಮೊದಲಿಗೆ ನಗರದ ಎಸ್​ಎನ್​ಆರ್​ ಆಸ್ಪತ್ರೆಗೆ ಭೇಟಿ ನೀಡಿದ ತಂಡವು, ತುರ್ತು ಚಿಕಿತ್ಸಾ ಟಕ, ಒಪಿಡಿ ಕೌಂಟರ್​ ವೀಸಿದರು. ರೋಗಿಗಳೊಂದಿಗೆ ಚರ್ಚೆ ನಡೆಸಿದರು. ವೇಮಗಲ್​ ಕಡೆಯ ವ್ಯಕ್ತಿಯೊಬ್ಬರು ನೆನ್ನೆಯ ರಾತ್ರಿ ಚಿಕಿತ್ಸೆಗಾಗಿ ದಾಖಲಾಗಿದ್ದು, ಬೆಡ್​ ನೀಡದೆ ಸತಾಯಿಸುತ್ತಿದ್ದಾರೆ. ವಾರ್ಡ್​ ಸಿಬ್ಬಂದಿಯನ್ನು ಕೇಳಿದ್ರೆ ಬೇಡ್​ ಖಾಲಿಯಿಲ್ಲ ಅಂತ ಹೇಳುತ್ತಿದ್ದಾರೆ, ನಾನು ಬಡವ ಅನ್ನೋ ಕಾರಣಕ್ಕೆ ಬೆಡ್​ ನೀಡುತ್ತಿಲ್ಲ. ಆದ್ದರಿಂದ ಪೊಲೀಸರಿಗೆ ದೂರು ನೀಡಲು ಹೋಗುತ್ತಿದ್ದೇನೆ ಎಂದು ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕಿ ಡಾ.ಮಮತಾ, ಬೆಡ್​ ಖಾಲಿಯಿಲ್ಲ ಅಂತ ಹೇಳಲು ಸಾಧ್ಯವಿಲ್ಲ. ರಾತ್ರಿ ಬಂದಿರುವುದರಿಂದ ವಾರ್ಡ್​ಗೆ ಸ್ಥಳಾಂತರ ಮಾಡಿರಬಹುದು ಎಂದು ಸಿಬ್ಬಂದಿಯನ್ನು ಕರೆಯಿಸಿ ವಿಚಾರಿಸಿದರು. ಆಗ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಿ ವಾರ್ಡ್​ಗೆ ಕಳುಹಿಸಲಾಗಿದೆ ಎಂದು ತಿಳಿಸಿದರು. ಇದಕ್ಕೆ ಗರಂ ಆದ ಅಧ್ಯಕ್ಷ ಡಾ.ಟಿ.ಶ್ಯಾಮ್​ ಭಟ್​ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ರೋಗಿಗಳ ಬಗ್ಗೆ ಉದಾಸೀನ ತೋರಬೇಡಿ. ಕಾಳಜಿಯಿಟ್ಟು ಸೇವೆ ಮಾಡಿ ಎಂದು ಎಚ್ಚರಿಕೆ ನೀಡಿದರು.

ವಿದ್ಯಾರ್ಥಿಗಳಿಂದ ದೂರುಗಳ ಸುರಿಮಳೆ: ನಗರದ ಇಟಿಸಿಎಂ ವೃತ್ತದಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್​ ಮತ್ತು ಮೆಟ್ರಿಕ್​ ನಂತರ ವಿದ್ಯಾರ್ಥಿನಿಲಯಗಳಿಗೆ ಆಗಮಿಸಿದರು. ವಿದ್ಯಾರ್ಥಿಗಳೊಂದಿಗೆ ಚರ್ಚಿಸುತ್ತಿದ್ದಾಗ ವಿದ್ಯಾರ್ಥಿಗಳು ದೂರುಗಳ ಸುರಿಮಳೆ ಗೈದರು. ಕುಡಿಯುವ ನೀರಿನ ಅಸಮರ್ಪಕ ಪೂರೈಕೆ, ರುಚಿಯಿಲ್ಲದ ಊಟ ಕುರಿತು ಅಧ್ಯಕ್ಷರ ಗಮನಕ್ಕೆ ತಂದರು.ಆಗ ಮೇಲ್ವಿಚಾರಕ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು, ಹಾಸ್ಟೆಲ್​ಗಳಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಬೇಕು. ದೂರದ ಊರುಗಳಿಂದ ನಗರಕ್ಕೆ ಬಂದು ವ್ಯಾಸಂಗ ಮಾಡುತ್ತಾರೆ. ಸರಿಯಾದ ಸೌಲಭ್ಯ ಇಲ್ಲ ಅಂದರೆ ಹೇಗೆ, ಇದನ್ನೆಲ್ಲ ಸರಿಪಡಿಸಿಕೊಳ್ಳಬೇಕು ಎಂದು ತಾಕೀತು ಮಾಡಿದರು.

ಅಧಿಕಾರಿಗಳು ಪರಿಶೀಲಿಸಬೇಕು: ನಗರದ ಕೆಎಸ್​ಆರ್​ಟಿ ಬಸ್​ ನಿಲ್ದಾಣಕ್ಕೆ ಭೇಟಿ ನೀಡಿ ಸ್ವಚ್ಛ್ಚತೆ, ಮೂಲ ಸೌಲಭ್ಯಗಳ ವ್ಯವಸ್ಥೆ, ಪ್ರಯಾಣಿಕರಿಗೆ ಬಸ್​ ಲಭ್ಯತೆ ಕುರಿತು ಮಾಹಿತಿ ಪಡೆದುಕೊಂಡ ತಂಡವು, ನಿಲ್ದಾಣದಲ್ಲಿನ ವಾಣಿಜ್ಯ ಮಳಿಗೆಗಳಲ್ಲಿನ ವಸ್ತುಗಳನ್ನು ಉತ್ಪಾದನೆ, ಅವಧಿ ಮುಗಿದ ದಿನಾಂಕ, ಕಂಪನಿ ವೀಸಿದರು. ಎಂಆರ್​ಪಿ ದರಕ್ಕಿಂತ ಹೆಚ್ಚು ಮಾರಾಟ ಮಾಡುವುದು, ಅವಧಿ ಮುಗಿದ ವಸ್ತುಗಳನ್ನು ಮಾರಾಟ ಮಾಡಿದ್ದು ಕಂಡು ಬಂದರೆ ಕೂಡಲೇ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಅಂಗಡಿ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net