

ದಾಬಸ್ಪೇಟೆ : ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಾಜ್ಯ ಮಹಿಳಾ ಆಯೋಗ ಅಧ್ಯೆ ನಾಗಲಕ್ಷಿ$್ಮ ಚೌಧರಿ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲದೆ ಅವ್ಯವಸ್ಥೆ ಆಗಿರುವುದನ್ನು ಕಂಡು ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.
ಆರು ತಿಂಗಳ ಹಿಂದೆಯೇ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಕೊಂಡಿದ್ದು. ಕಾರಣಾಂತರಗಳಿಂದ ಬರಲಾಗಿರಲಿಲ್ಲ, ಆದರೆ ಇವತ್ತು ನಾನು ಆಸ್ಪತ್ರೆಗೆ ಬರುತ್ತೇನೆ ಎಂದು ಮಾಹಿತಿ ಇದ್ದರೂ ಆಸ್ಪತ್ರೆ ಸ್ವಚ್ಛ ಮಾಡಿಲ್ಲ. ಇದೇನಾ ನಿಮ್ಮ ಕಾರ್ಯ ವೈಖರಿ ಎಂದು ಸಿಬ್ಬಂದಿ ವಿರುದ್ಧ ಗರಂ ಆದರು, ಹೆರಿಗೆ ಸೌಲಭ್ಯಗಳ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದು ಹೆರಿಗೆ ಕೊಠಡಿ ವೀಸಿದ ನಾಗಲಕ್ಷಿ$್ಮ ಚೌಧರಿ, ಇದೇನು ಹೆರಿಗೆ ಕೊಠಡಿಯಾ ಅಥವಾ ಸ್ಟೋರ್ ರೂಮ್ ಎಂದು ಪ್ರಶ್ನಿಸಿದರು. ಹೆರಿಗೆ ಮಾಡಲು ಬಳಸುವ ಉಪಕರಣಗಳು, ನಂತರ ಮಗುವನ್ನು ಆರೈಕೆ ಮಾಡುವ ಬಗ್ಗೆ ನರ್ಸ್ಗಳಿಗೆ ಆಯೋಗದ ಅಧ್ಯರು ಪ್ರಶ್ನಿಸಿದಾಗ ಉತ್ತರಿಸಲಾಗದೇ ತಡಬಡಿಸಿದರು. ನೀವೆ ತಾನೇ ಹೆರಿಗೆ ಮಾಡೋದು? ನಿಮಗೇ ಏನೂ ಗೊತ್ತಿಲ್ಲವೆಂದರೆ ಹೇಗೆ ಎಂದು ನರ್ಸ್ಗಳನ್ನು ತರಾಟೆಗೆ ತೆಗೆದುಕೊಂಡರು.
ಕಾಯಂ ವೈದ್ಯರಿಲ್ಲ : ದಾಬಸ್ಪೇಟೆ ಪಟ್ಟಣವಾಗಿ ಬೆಳೆಯುತ್ತಿದೆ. ಆದರೆ ಈ ಆಸ್ಪತ್ರೆಗೆ ಕಾಯಂ ವೈದ್ಯರಿಲ್ಲ. ಪ್ರತಿನಿತ್ಯ ಬದಲಾಗುತ್ತಿರುತ್ತಾರೆ. ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಿ ಕಾಯಂ ವೈದ್ಯರು, ಸಿಬ್ಬಂದಿ ನೇಮಕ ಮಾಡಬೇಕೆಂದು ಸಾರ್ವಜನಿಕರು ಅಧ್ಯಕ್ಷರಿಗೆ ಒತ್ತಾಯಿಸಿದರು. ಆಸ್ಪತ್ರೆಗೆ ನೇಮಕವಾಗಿರುವ ವೈದ್ಯರೊಬ್ಬರು ಚಿಕಿತ್ಸೆಗೆ ಬರುವ ರೋಗಿಗಳ ಬಳಿ ಹಣ ಕೇಳುತ್ತಾರೆ. ಔಷಧ ಇದ್ದರೂ ಹೊರಗಡೆಯಿಂದ ತರುವಂತೆ ಚೀಟಿ ಬರೆದು ಕೊಡುತ್ತಾರೆ. ಸರಿಯಾಗಿ ಚಿಕಿತ್ಸೆ ನೋಡುವುದಿಲ್ಲ. ಏನಾದರೂ ಪ್ರಶ್ನಿಸಿದರೇ ರೋಗಿಗನ್ನೇ ಬೈಯುತ್ತಾರೆ. ಯಾರಾದರೂ ಪ್ರಮಾಣ ಪತ್ರಗಳಿಗೆ ಗೆಜೆಡೆಟ್ ಸಹಿ ಪಡೆಯಲು ಬಂದರೆ ಅವರ ಬಳಿಯೇ ಹಣ ಕೇಳುತ್ತಾರೆ ಎಂದು ವೈದ್ಯರ ವಿರುದ್ಧ ಸ್ಥಳಿಯರು ಅಧ್ಯಕ್ಷರ ಮುಂದೆ ಸಾಲುಸಾಲು ಆರೋಪ ಮಾಡಿದರು. ಅಂತಹ ವೈದ್ಯರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.