ಭಂಟನೂರ ಆರೋಗ್ಯ ಕೇಂದ್ರದ ಅವ್ಯವಸ್ಥೆ

Chaos at Bhantanur Health Center
ತಾಳಿಕೋಟೆ ತಾಲೂಕಿನ ಭಂಟನೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಅವ್ಯವಸ್ಥೆ ಕುರಿತು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್​. ಪಾಟೀಲ ಅವರಿಗೆ ಅಂಬಾಜಿ ೂರ್ಪಡೆ ದೂರು ಸಲ್ಲಿಸಿದರು.
Published on

ತಾಳಿಕೋಟೆ: ತಾಲೂಕಿನ ಭಂಟನೂರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸದ್ಯ ಖಾಸಗಿ ಎನ್​ಜಿಒಗೆ ಗುತ್ತಿಗೆ ವಹಿಸಿದ್ದರಿಂದ ಅಲ್ಲಿ ಯಾವುದೇ ಮೂಲ ಸೌಲಭ್ಯಗಳಿಲ್ಲ. ಸುತ್ತಮುತ್ತಲಿನ ಗ್ರಾಮಗಳ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಕೂಡಲೇ ಎನ್​ಜಿಒ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್​. ಪಾಟೀಲ ಅವರಿಗೆ ಸಾಮಾಜಿಕ ಕಾರ್ಯಕರ್ತ ಅಂಬಾಜಿ ೂರ್ಪಡೆ ಸೋಮವಾರ ದೂರು ಸಲ್ಲಿಸಿದರು.

ಲೋಕಾಯುಕ್ತ ನ್ಯಾಯಮೂರ್ತಿ ಅವರನ್ನು ತಾಲೂಕಿನ ಪಡೇಕನೂರ ಗ್ರಾಮದ ಅವರ ಸ್ವಗೃಹದಲ್ಲಿ ಭೇಟಿಯಾದ ಸೆರ್ಪಡೆ ಅವರು ಭಂಟನೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಸರ್ಕಾರದ ನಿರ್ವಹಣೆಯಲ್ಲಿದ್ದಾಗ ಸುತ್ತಲಿನ ಗ್ರಾಮಗಳ ಗ್ರಾಮಸ್ಥರಿಗೆ ಸೂಕ್ತ ಚಿಕಿತ್ಸೆ ಜೊತೆಗೆ ಮೂಲ ಸೌಕರ್ಯಗಳು ಸುಸ್ಥಿತಿಯಲ್ಲಿದ್ದವು.

ಆದರೆ ಸದರಿ ಆಸ್ಪತ್ರೆಯನ್ನು ಸಿಂದಗಿಯ ಕಸ್ತೂರಿಬಾಯಿ ಈರಪ್ಪ ಲೋಣಿ ಮೆಮೂರಿಯಲ್​ ಇನ್ನೋವೇಟಿವ್​ ರಿಸರ್ಚ್​ ಡೆವಲಪಮೆಂಟ್​ ಮತ್ತು ಚಾರಿಟಬಲ್​ ಟ್ರಸ್ಟಿಗೆ ನಿರ್ವಹಣೆಯ ಗುತ್ತಿಗೆ ನೀಡಿದಾಗಿನಿಂದಲೂ ಬಡ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಎಂಬುದೇ ಮರೀಚಿಕೆಯಾಗಿದೆ.

ಆಸ್ಪತ್ರೆಯಲ್ಲಿ ಬೆಡ್​ ವ್ಯವಸ್ಥೆ ಹಾಗೂ ಸೂಕ್ತ ಔಷಧ ಉಪಚಾರದ ಕೊರತೆ ಇದೆ. ಆಸ್ಪತ್ರೆಯ ಆವರಣದಲ್ಲಿ ದನಗಳನ್ನು ಕಟ್ಟಲಾಗುತ್ತಿದ್ದು, ಮುಳ್ಳು ಕಂಠಿಗಳು, ಕಸದ ರಾಶಿಯೇ ತುಂಬಿ ತುಳುಕುತ್ತಿದೆ. ಈ ಆಸ್ಪತ್ರೆಯಲ್ಲಿ ಕಳೆದ 2 ವರ್ಷಗಳಿಂದ ಕಾರ್ಯನಿರ್ವಹಿಸಿದ ವೈದ್ಯ, ಸಿಬ್ಬಂದಿಗೆ ವೇತನ ನೀಡಲಾರದ್ದಕ್ಕೆ ಆಸ್ಪತ್ರೆಯನ್ನು ಬಿಟ್ಟು ಹೋಗಿದ್ದಾರೆ.

ಸದ್ಯ ವೈದ್ಯ, ಸಿಬ್ಬಂದಿ ಇದ್ದರೂ ಸರಿಯಾದ ವೇತನವಿಲ್ಲದಕ್ಕೆ ಕೇವಲ ಕಾಟಾಚಾರಕ್ಕೆ ಬಂದು ಹೋಗುತ್ತಿರುವುದು ಎದ್ದು ಕಾಣುತ್ತಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆದರೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಅಸಡ್ಡೆತದಿಂದ ಆಸ್ಪತ್ರೆ ರೋಗಗ್ರಸ್ಥವಾಗಿದೆ. ಕೂಡಲೇ ಆಸ್ಪತ್ರೆಗೆ ಖುದ್ದಾಗಿ ಭೇಟಿ ನೀಡಿ ಸೂಕ್ತ ಕ್ರಮ ಜರುಗಿಸಬೇಕೆಂದು ಸಮಗ್ರ ದಾಖಲೆಗಳೊಂದಿಗೆ ಮನವರಿಕೆ ಮಾಡಿ ದೂರನ್ನು ಸೆರ್ಪಡೆ ಸಲ್ಲಿಸಿದರು.

ಸದರಿ ದೂರನ್ನು ಆಲಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್​. ಪಾಟೀಲ ಅವರು ಸ್ಥಳದಲ್ಲಿಯೇ ಉಪಸ್ಥಿತರಿದ್ದ ಲೋಕಾಯುಕ್ತ ಅಧಿಕಾರಿಗಳಿಗೆ ಕೂಡಲೇ ಈ ವಿಷಯ ಗಂಭೀರವಾಗಿದ್ದು ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net