

ಸವಣೂರ: ಅಂತರಂಗ ಶುದ್ಧೀಕರಣಕ್ಕಾಗಿ ಶಿವ ನಾಮಸ್ಮರಣೆ ಅವಶ್ಯವಾಗಿದೆ ಎಂದು ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಸ್ವಾಮೀಜಿ ಹೇಳಿದರು.
ತಾಲೂಕಿನ ಹೂವಿನಶಿಗ್ಲಿ ಗ್ರಾಮದ ವಿರಕ್ತಮಠದ ಆವರಣದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶಿವ ನಾಮಸ್ಮರಣೆಯೊಂದಿಗೆ ಮಠದ ಅನಾಥ ಮಕ್ಕಳೊಂದಿಗೆ ಭಕ್ತರು ಶಿವರಾತ್ರಿ ಹಬ್ಬ ಆಚರಿಸುತ್ತಿರುವುದು ಶ್ಲಾಘನೀಯವಾಗಿದೆ. ಲಿಂ. ನಿರಂಜನ ಮಹಾಸ್ವಾಮೀಜಿ ಅವರು ಶಿವರಾತ್ರಿ ದಿನ ಜನಿಸಿದ್ದಾರೆ. ಶ್ರೀಗಳ ಜನ್ಮದಿನದ ಅಂಗವಾಗಿ ಪ್ರತಿವರ್ಷ ಶಿವಯೋಗದೊಂದಿಗೆ ಲಿಂ. ಶ್ರೀಗಳ ನಾಮಜಪದೊಂದಿಗೆ ಜಾಗರಣೆ ಕೈಗೊಳ್ಳಲಾಗುತ್ತಿದೆ ಎಂದರು.
ಶ್ರೀ ಚನ್ನವೀರ ಸ್ವಾಮೀಜಿ ಅವರು ಭಕ್ತರೊಂದಿಗೆ ಸಾಮೂಹಿಕ ಇಷ್ಟಲಿಂಗಾರ್ಚನೆ ಕೈಗೊಂಡರು. ಮಠದ ವಟುಗಳು ಮಂತ್ರ, ವೇದಘೋಷ ಕೈಗೊಂಡರು. ವೈದ್ಯ ಡಾ. ಎನ್.ಬಿ. ನಾಗರಹಳ್ಳಿ, ಶಂಭುಲಿAಗಯ್ಯ ಕಂಬಾಳಿಮಠ ಮಾತನಾಡಿದರು. ಮಹಾ ಶಿವರಾತ್ರಿ ಆಚರಣೆ ನೇತೃತ್ವ ವಹಿಸಿದ್ದ ಶೇಖಣ್ಣ ಬೆಂಚಳ್ಳಿ ದಂಪತಿಯನ್ನು ಸನ್ಮಾನಿಸಲಾಯಿತು. ಬಸಪ್ಪ ಬಿಕ್ಕಣ್ಣನವರ, ಬಸಪ್ಪ ನಾಗಪ್ಪನವರ, ಬಸವರಾಜ ನಾಗಪ್ಪನವರ, ಶಿವಲಿಂಗಯ್ಯ ಕಂಬಾಳಿಮಠ, ಹಸನಸಾಬ್ ಹುಲ್ಲೂರ, ನಿಂಗಪ್ಪ ಹೆಬಸೂರ ಇತರರಿದ್ದರು. ಶಿಕ್ಷಕರಾದ ಮಹಾದೇವ ಬಿಷ್ಠಣ್ಣವರ, ಪಿ.ಎಚ್. ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.