ಹನುಮಾನ್ ತಾಂಡವ ಸಾಮೂಹಿಕ ಸ್ತೋತ್ರ ಪಠಣ 9ಕ್ಕೆ

6gvt 2
ಹನುಮಾನ್ ತಾಂಡವ ಸಾಮೂಹಿಕ ಸ್ತೋತ್ರ ಪಠಣ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಗಂಗಾವತಿಯಲ್ಲಿ ಶನಿವಾರ ಬಿಡುಗಡೆಗೊಳಿಸಲಾಯಿತು. ೌಂಡೇಷನ್ ಾರ್ ಹೋಲಿಸ್ಟಿಕ್ ಡೆವಲಪ್‌ಮೆಂಟ್ ಸಂಚಾಲಕಿ ಮಾಧುರಿ ಸಹಸ್ರಬುದ್ಧೆ, ಕಾರ್ಯಕ್ರಮ ಸಂಚಾಲಕ ಸಂತೋಷ ಕೆಲೋಜಿ, ಸಂಸ್ಥೆ ಪ್ರತಿನಿಧಿಗಳಾದ ಶೈಲಜಾ ವಿಠ್ಠಲ, ದಿವ್ಯಾ ಕಂದಕೂರ್, ಮಾಧುರಿ ಬೋಧನಕರ್ ಇತರರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಗಂಗಾವತಿ
ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಉದ್ಘಾಟನೆಗೊಳ್ಳುತ್ತಿರುವ ರಾಮಮಂದಿರ ಕಾರ್ಯಕ್ರಮದ ಯಶಸ್ಸು ಮತ್ತು ಲೋಕಕಲ್ಯಾಣಾರ್ಥವಾಗಿ ತಾಲೂಕಿನ ಆನೆಗೊಂದಿಯ ಪಂಪಾಸರೋವರ ಬಳಿ ಜ.9ರಂದು ಹನುಮಾನ್ ತಾಂಡವ ಸಾಮೂಹಿಕ ಸ್ತೋತ್ರ ಪಠಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ೌಂಡೇಷನ್ ಾರ್ ಹೋಲಿಸ್ಟಿಕ್ ಡೆವಲಪ್‌ಮೆಂಟ್ ಸಂಚಾಲಕಿ ಮಾಧುರಿ ಸಹಸ್ರಬುದ್ಧೆ ಹೇಳಿದರು.


ನಗರದ ಪತ್ರಿಕಾಭವನದಲ್ಲಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಶನಿವಾರ ಬಿಡುಗಡೆಗೊಳಿಸಿ ಮಾತನಾಡಿದರು. 2016ರಲ್ಲಿ ಅಸ್ತಿತ್ವಕ್ಕೆ ಬಂದ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆ, ಹಲವು ದೇಶಗಳಲ್ಲಿ ಸನಾತನ ಧರ್ಮ ಮತ್ತು ಸಂಸ್ಕೃತಿ ಬಗ್ಗೆ ಜನರಿಗೆ ತಿಳಿಹೇಳಿದ್ದು, ಮಾತೃಶಕ್ತಿ ಮತ್ತು ಮದರ್ಸ್‌ ಆನ್ ವ್ಹೀಲ್ಸ್ ಪರಿಕಲ್ಪನೆಯಡಿ ತಾಯಂದಿರಿಗೆ ಮಕ್ಕಳ ಭವಿಷ್ಯ ಕುರಿತು ಸಂಸ್ಕಾರ ನೀಡಲಾಗುತ್ತಿದೆ ಎಂದು ತಿಳಿಸಿದರು.


ಸಂಕಷ್ಟಕ್ಕೊಳಗಾಗಿರುವ ಕುಟುಂಬಗಳಿಗೆ ಸ್ತೋತ್ರ ಪಠಣ ಮತ್ತು ಕಲಿಕಾ ಕಾರ್ಯಕ್ರಮಗಳ ಮೂಲಕ ಮಾನಸಿಕವಾಗಿ ಸದೃಢರನ್ನಾಗಿ ಮಾಡಲಾಗುತ್ತಿದೆ. 22 ದೇಶಗಳಲ್ಲಿ ಯಶಸ್ವಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸನಾತನ ಧರ್ಮ ಮತ್ತು ಭಾರತೀಯ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಪಂಪಾಸರೋವರದಲ್ಲಿ ಸಾವಿರಕ್ಕೂ ಹೆಚ್ಚು ಮಹಿಳೆಯರೊಂದಿಗೆ ಹನುಮಾನ ತಾಂಡವ ಸಾಮೂಹಿಕ ಪಠಣ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಭಾಗವಹಿಸಲು ವಿವಿಧ ಭಾಗಗಳಿಂದ ಮಹಿಳೆಯರು ಆಗಮಿಸುತ್ತಿದ್ದು, ಸೂರ್ಯೋದಯ ಸಮಯದಲ್ಲಿ ಸಾಮೂಹಿಕ ಪಠಣ ನಡೆಯಲಿದೆ ಎಂದರು.


ೌಂಡೇಷನ್ ಯೋಜನೆಗಳು, ಉದ್ದೇಶ, ಜನಪರ, ಆರ್ಥಿಕ ಮತ್ತು ಆರೋಗ್ಯ ಸುಧಾರಣೆ ಕಾರ್ಯಕ್ರಮಗಳ ಕುರಿತು ಕಾರ್ಯಕ್ರಮ ಸಂಚಾಲಕ ಸಂತೋಷ ಕೆಲೋಜಿ ಮಾತನಾಡಿದರು. ಸಂಸ್ಥೆ ಪ್ರತಿನಿಧಿಗಳಾದ ಶೈಲಜಾ ವಿಠ್ಠಲ, ದಿವ್ಯಾ ಕಂದಕೂರ್, ಮಾಧುರಿ ಬೋಧನಕರ್, ವೈಷ್ಣವಿ ಕೆಲೋಜಿ, ಸುಮಲತಾ ಭೂಪಾಳಂ, ಪ್ರಿಯಾಂಕಾ ಪವಾರ್, ಮಂಜುನಾಥ ಕಟ್ಟಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net