ಧಾರಾವತಿಯಲ್ಲಿ ಹನುಮಾನ ಚಾಲೀಸ ಪಠಣ

h23-gokul road
Published on

ಹುಬ್ಬಳ್ಳಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ನಿಮಿತ್ತ ಶ್ರೀರಾಮಚಂದ್ರ ಮೂರ್ತಿ ಪ್ರತಿಷ್ಠಾನ ಮತ್ತು ನಿರಾಮಯ ಫೌಂಡೇಷನ್ ವತಿಯಿಂದ ನಗರ ಹೊರವಲಯದ ಧಾರಾವತಿಯ ಹನುಮಂತ ದೇವಸ್ಥಾನದಲ್ಲಿ ಜ. 20ರವರೆಗೆ ಪ್ರತಿ ಶನಿವಾರ ಹನುಮಾನ ಚಾಲೀಸ ಹಾಗೂ ಶ್ರೀರಾಮಾಂಜನೇಯ ಜಪ ಏರ್ಪಡಿಸಲಾಗಿದೆ.
ಬೆಳಗ್ಗೆ 9 ಗಂಟೆಗೆ ಆರಂಭವಾದ ಕಾರ್ಯಕ್ರಮದಲ್ಲಿ ಪ್ರದೀಪ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಮಧ್ಯಾಹ್ನ 12.30 ಗಂಟೆಗೆ ಹನುಮಾನ ಚಾಲೀಸ, ರಾಮ ನಾಮ ಜಪ, ಭಜನೆ, ಗೀತೆಗಳ ಮೂಲಕ ಭಕ್ತರು ವೈಕುಂಠ ಏಕಾದಶಿ ನಿಮಿತ್ತ ಶನಿವಾರ ಜಪ ಕಾರ್ಯಕ್ರಮ ಮುಂದುವರಿಸಿದರು. ನಂತರ ದೇವಸ್ಥಾನದಲ್ಲಿ ಮಹಾಪೂಜೆ ನೆರವೇರಿಸಿ, ಪ್ರಸಾದ ವಿತರಿಸಲಾಯಿತು.
ಪ್ರತಿಷ್ಠಾನದ ಮಾರ್ಗದರ್ಶಕ ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ಅಧ್ಯಕ್ಷ ಗುರು ಬನ್ನಿಕೊಪ್ಪ, ಹಿರಿಯರಾದ ಕಲ್ಲಪ್ಪ ಮೊರಬದ, ದೇವರಾಜ ದಾಡಿಭಾವಿ, ಉಪಾಧ್ಯಕ್ಷ ಗುರುರಾಜ ಭದ್ರಾಪುರ, ಸಂಚಾಲಕ ಗಿರಿಧರ ಹಿರೇಮಠ, ಮಹೇಶ ಶ್ಯಾಮ, ಮನು ಹಳೇಗೌಡ್ರ, ಪ್ರತೀಕ ಕುಂದಗೋಳ, ದೀಪಿಕಾ ಬೆಡಸೂರ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net