

ನರೇಗಲ್ಲ: ಮನುಷ್ಯ ಸಂಘ ಜೀವಿ. ಎಲ್ಲರೊಂದಿಗೆ ಹೊಂದಾಣಿಕೆಯ ಬದುಕು ಸಾಗಿಸುವುದು ಅವನ ಕರ್ತವ್ಯ. ಅದನ್ನು ಬಿಟ್ಟು ಅಹಂಕಾರಕ್ಕೆ ಒಳಗಾದರೆ, ಆತ ಎಲ್ಲವನ್ನೂ ಮತ್ತು ಎಲ್ಲರನ್ನೂ ಕಳೆದುಕೊಳ್ಳುತ್ತಾನೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಹೇಳಿದರು.
ಪಟ್ಟಣದ ಶ್ರೀದತ್ತಾತ್ರೇಯ ದೇವಸ್ಥಾನದಲ್ಲಿ ಗುರುವಾರ ಏರ್ಪಡಿಸಿದ್ದ ಹನುಮಾನ್ ಚಾಲೀಸಾ ಪಠಣ ಅಭ್ಯಾಸ ವರ್ಗದಲ್ಲಿ ಅವರು ಮಾತನಾಡಿದರು.
ಹನುಮಾನ್ ಚಾಲೀಸಾ ಪಠಣದಿಂದ ಭಯ, ಆತಂಕ ದೂರವಾಗುತ್ತವೆ. ನಿತ್ಯವೂ ಮನೆಯಲ್ಲಿ ಇದನ್ನು ಪಠಣ ಮಾಡುವುದರಿಂದ ದುಷ್ಟ ಶಕ್ತಿಗಳು ನಾಶವಾಗುತ್ತವೆ. ಈ ಹಿನ್ನೆಲೆಯಲ್ಲಿ ನೆಮ್ಮದಿಯ ಬದುಕು ನಮ್ಮದಾಗಬೇಕೆಂದು ಶ್ರೀದತ್ತಾವಧೂತ ಮಹರಾಜರು ಅಖಂಡ 13 ತಾಸುಗಳ ಹನುಮಾನ್ ಚಾಲೀಸಾ ಪಠಣದ ಅವಕಾಶವನ್ನು ನರೇಗಲ್ಲ ಪಟ್ಟಣ ಮತ್ತು ಸುತ್ತಲಿನ ಎಲ್ಲ ಭಕ್ತರಿಗೆ ಒದಗಿಸಿಕೊಟ್ಟಿದ್ದಾರೆ. ಡಿ. 8ರಂದು ಹನುಮಾನ್ ಚಾಲೀಸಾ ಪಠಣದಲ್ಲಿ ಎಲ್ಲರೂ ಪಾಲ್ಗೊಳ್ಳೋಣ. ಮನುಷ್ಯನಲ್ಲಿ ಅರಿಷಡ್ವರ್ಗಗಳಿವೆ. ಇವುಗಳನ್ನು ಮೆಟ್ಟಿ ನಿಲ್ಲುವುದು ಸುಲಭದ ಮಾತಲ್ಲ. ಇವುಗಳೊಂದಿಗೆ ಅವನಲ್ಲಿ ಅಹಂಕಾರವೇನಾದರೂ ಸೇರಿದರೆ ಅವನನ್ನು ತಡೆಯುವವರು ಯಾರೂ ಇಲ್ಲದಂತಾಗುತ್ತದೆ. ಆದ್ದರಿಂದ ಇಂತಹ ಧಾರ್ಮಿಕ ಕಾರ್ಯಗಳಲ್ಲಿ ಮನಸನ್ನು ತೊಡಗಿಸುವ ಮೂಲಕ ಅಹಂಕಾರದಿಂದ ದೂರವಿರಬಹುದು ಎಂದರು.
ಎ.ಜೆ. ಕುಲಕರ್ಣಿ, ಶೇಷಗಿರಿ ಕುಲಕರ್ಣಿ, ಬಾಬುರಾವ ಕಾಳೆ, ಆರ್.ಡಿ. ಕುಲಕರ್ಣಿ, ಎಸ್.ಎಚ್. ಕುಲಕರ್ಣಿ, ನಾಗೇಶಭಟ್ಟ ಗ್ರಾಮಪುರೋಹಿತ, ಅಜಿತ ಕುಲಕರ್ಣಿ, ರಾಮಕೃಷ್ಣ ಸದರಜೋಷಿ, ಪವನ ಗ್ರಾಮಪುರೋಹಿತ, ಆನಂದ ಕುಲಕರ್ಣಿ, ಮುಕುಂದ ಸೂರಭಟ್ಟನವರ, ಜ್ಯೋತಿ ನಾಡಿಗೇರ, ಅನಿತಾ ಗ್ರಾಮಪುರೋಹಿತ, ಸೀಮಾ ಕೊಂಡಿ, ಡಾ. ಸಪ್ನಾ ಕಾಳೆ, ರಾಜಶ್ರೀ ಕುಲಕರ್ಣಿ, ಲಕ್ಷ್ಮೀ ಗ್ರಾಮಪುರೋಹಿತ, ವಾಣಿ ಕುಲಕರ್ಣಿ, ಅರ್ಚನಾ ಕುಲಕರ್ಣಿ, ವಿದ್ಯಾ ಗ್ರಾಮಪುರೋಹಿತ, ದೀಪಾ ಕುಲಕರ್ಣಿ, ಅಪೇಕ್ಷಾ ಕುರಂದ್ವಾಡ, ಜಯಶ್ರೀ ಗ್ರಾಮಪುರೋಹಿತ, ಪ್ರಿಯಾ ಕುಲಕರ್ಣಿ, ರೂಪಾ ಗ್ರಾಮಪುರೋಹಿತ, ಶ್ರೇಯಾ ನಾಡಗೇರ, ಪ್ರಭಾ ರಾಯಭಟ್ಟನವರ, ಸ್ಫೂರ್ತಿರಾಣಿ ಕುಲಕರ್ಣಿ, ಭಾಗ್ಯಾಬಾಯಿ ಕಾಳೆ, ಶಾರದಾಬಾಯಿ ಗ್ರಾಮಪುರೋಹಿತ ಇದ್ದರು.