ಮಂದಿರ ಉದ್ಘಾಟನೆಯ ದಿನ ರಾಮನ ಜಪ ಮಾಡಿ

Chant Rama on the opening day of the temple
ತಾಳಿಕೋಟೆ ಪಟ್ಟಣದ ಆರ್ಯವೈಶ್ಯ ಸಮಾಜದವರು ಮನೆಮನೆಗೆ ತೆರಳಿ ಅಯೋಧ್ಯೆಯಿಂದ ಆಗಮಿಸಿದ ಮಂತ್ರಾಕ್ಷತೆಯನ್ನು ವಿತರಿಸಿದರು. ಡಾ. ಎಲ್.ಎನ್. ಶೆಟ್ಟಿ, ಕೃಷ್ಣಯ್ಯ ಶೆಟ್ಟಿ, ದತ್ತಾತ್ರೇಯ ಹೆಬಸೂರ, ಕೃಷ್ಣಾ ಮಾನ್ವಿ, ಶ್ರೀಕಾಂತ ಶೆಟ್ಟಿ ಇತರರಿದ್ದರು.
Published on

ತಾಳಿಕೋಟೆ: ಹಿಂದು ಸಮಾಜದವರ ಆರಾಧ್ಯ ದೇವರಾಗಿರುವ ಶ್ರೀರಾಮನ ಮಂದಿರ ಉದ್ಘಾಟನೆಯ ದಿನದಂದು ಎಲ್ಲರೂ ರಾಮನ ಜಪ ಮಾಡಬೇಕು ಎಂದು ಆರ್ಯವೈಶ್ಯ ಸಮಾಜದ ಅಧ್ಯಕ್ಷ ಡಾ. ಎಲ್.ಎನ್. ಶೆಟ್ಟಿ ಹೇಳಿದರು.

ರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಅಯೋಧ್ಯೆಯಿಂದ ಆಗಮಿಸಿದ ಮಂತ್ರಾಕ್ಷತೆಯನನು ಮನೆಮನೆಗೆ ವಿತರಿಸಿ ಅವರು ಮಾತನಾಡಿದರು.

ಮನೆಮನೆಗೆ ವಿತರಿಸಲಾಗುತ್ತಿರುವ ಮಂತ್ರಾಕ್ಷತೆಯನ್ನು ದೇವರ ಜಗಲಿಯ ಮೇಲಿಟ್ಟು ನಿತ್ಯ ಪೂಜಿಸುವ ಕಾರ್ಯ ಮಾಡಿ ಅವಕಾಶಗಳು ಸಿಕ್ಕಾಗ ರಾಮನ ದರ್ಶನಕ್ಕೆ ತೆರಳಿ ರಾಮನ ಕೃಪೆಗೆ ಪಾತ್ರರಾಗೋಣ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ನಗರೇಶ್ವರ ದೇವಸ್ಥಾನದಲ್ಲಿ ಮಂತ್ರಾಕ್ಷತೆಯೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಆರ್ಯವೈಶ್ಯ ಸಮಾಜದವರ ಮನೆಮನೆಗೆ ತೆರಳಿ ಮಂತ್ರಾಕ್ಷತೆಗೆ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಸಮಾಜದ ಮುಖಂಡರಾದ ಕೃಷ್ಣಯ್ಯ ಶೆಟ್ಟಿ, ದತ್ತಾತ್ರೇಯ ಹೆಬಸೂರ, ಕೃಷ್ಣಾ ಮಾನ್ವಿ, ಶ್ರೀಕಾಂತ ಶೆಟ್ಟಿ, ರವಿ ತಾಳಪಲ್ಲೆ, ಅರುಣ ಕನಕಗಿರಿ, ಸತ್ಯನಾರಾಯಣ ತಾಳಪಲ್ಲೆ, ಭೀಮಣ್ಣ ಅಗಡಿ, ಭಕ್ತಪ್ರಲ್ಹಾದ ಮಾನ್ವಿ, ಸಂದೀಪ ಶೆಟ್ಟಿ, ಪುರಸಭಾ ಸದಸ್ಯ ವಾಸುದೇವ ಹೆಬಸೂರ, ಸುಭದ್ರಾ ಹೆಬಸೂರ, ರಮಾ ತಾಳಪಲ್ಲೆ, ಸಾವಿತ್ರಿ ಹೆಬಸೂರ, ಸರೋಜಾ ತಾಳಪಲ್ಲೆ, ಕವಿತಾ ಜನಾದ್ರಿ, ಜ್ಯೋತಿ ಶೆಟ್ಟಿ, ಪ್ರತಿಭಾ ತಾಳಪಲ್ಲೆ, ಅರ್ಚನಾ ಮಾನ್ವಿ, ರಾಜಲಕ್ಷ್ಮೀ ಮಾನ್ವಿ, ರಾಧಾ ಕನಕಗಿರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net