ಕೆಸರಮಡು ಶ್ರೀ ಚನ್ನಕೇಶ್ವರ ದೇವಾಲಯದ ಜೀರ್ಣೋದ್ಧಾರಕ್ಕೆ ಶಾಸಕ ಗೌರಿಶಂಕರ್ ಚಾಲನೆ

29Tmk_Gowrishankar_Channakeshava
Published on

ತುಮಕೂರು: ಕೆಸರಮಡುವಿನ ಇತಿಹಾಸ ಪ್ರಸಿದ್ಧ ಶ್ರೀ ಚನ್ನಕೇಶ್ವರ ದೇವಾಲಯದ ಆವರಣದಲ್ಲಿ ಅಗ್ನಿವಂಶ ಕುಲದ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 20 ಲಕ್ಷ ರೂ., ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಹೇಳಿದರು.

ಕೆಸರುಮಡು ಗ್ರಾಮದಲ್ಲಿನ ಹೊಯ್ಸಳ ರಾಜರ ಕಾಲದ ಶ್ರೀಚನ್ನಕೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಗೌರಿಶಂಕರ್, ಚನ್ನಕೇಶ್ವರ ದೇಗುಲದ ಜೀರ್ಣೋದ್ಧಾರಕ್ಕೆ ವೈಯಕ್ತಿಕವಾಗಿ 2 ಲಕ್ಷ ರೂ., ಆರ್ಥಿಕ ನೆರವು ನೀಡುವ ಭರವಸೆಯಿತ್ತರು.

ಚನ್ನಕೇಶ್ವರ ದೇಗುಲವನ್ನು ಉತ್ತಮ ಪ್ರವಾಸಿ ತಾಣವಾಗಿ ರೂಪಿಸಲಾಗುವುದು. ಸಮುದಾಯ ಭವನ ಹಾಗೂ ದೇಗುಲ ಜೀರ್ಣೋದ್ಧಾರ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗುವುದು. ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಲಿ, ಕರೊನಾ ಮಹಾಮಾರಿ ಕಾಯಿಲೆ ಆದಷ್ಟು ಬೇಗ ನಿರ್ಮೂಲನೆಯಾಗಲಿ. ನಮ್ಮ ತುಮಕೂರು ತಾಲೂಕಿನ ಎಲ್ಲಾ ಜನತೆಗೆ ಒಳ್ಳೆಯದಾಗಲಿ ಎಂದು ಚನ್ನಕೇಶ್ವರ ಸ್ವಾಮಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದರು.

ಕೆಸರುಮಡು ಮುಖಂಡರಾದ ಶಾಂತ ಕುಮಾರ್, ಗೋಪಾಲಕೃಷ್ಣ, ಸುನಂದ, ಶ್ರೀನಿವಾಸ್, ಕೆ.ಎಸ್. ಗಂಗಾಧರ್, ವಸಂತಕುಮಾರ್, ರಾಮಣ್ಣ, ಎಜಾಜ್‌ಸಾಬ್, ಯಜಮಾನ್ ನರಸಿಂಹಣ್ಣ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net