ಎರಡೆತ್ತಿನಮಠದಲ್ಲಿ ಪುರಾಣ ಮಂಗಲೋತ್ಸವ

Published on

ಹುಬ್ಬಳ್ಳಿ: ಇಲ್ಲಿಯ ಎರಡೆತ್ತಿನಮಠದಲ್ಲಿ ಶ್ರಾವಣ ಮಾಸದ ಪುರಾಣ ಮಂಗಲೋತ್ಸವ ಹಾಗೂ ಲಿಂ. ಚನ್ನವಿರ ಸ್ವಾಮೀಜಿ ಪುಣ್ಯಸ್ಮರಣೋತ್ಸವ ಅಂಗವಾಗಿ ಸೆ. 6ರಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸೆ. 6ರಂದು ಸಂಜೆ 5ಕ್ಕೆ ಶ್ರೀಮಠಕ್ಕೆ ಆಗಮಿಸುವ ತಾಯಂದಿರಿಗೆ ಉಡಿ ತುಂಬುವ ಕಾರ್ಯಕ್ರಮ, ಉಪಮೇಯರ್ ದುರಗಮ್ಮ ಬಿಜವಾಡ ಉಪಸ್ಥಿತರಿರುವರು.

ಸೆ. 9ರಂದು ಬೆಳಗ್ಗೆ 7ಕ್ಕೆ ರುದ್ರಾಕ್ಷಿಧಾರಣೆ, ಲಿಂಗಧಾರಣೆ ಶಿವದೀಕ್ಷಾ ಹಾಗೂ ಅಯ್ಯಾಚಾರಗಳು ನಡೆಯಲಿವೆ. ಕೂಡಲದ ಗುರುನಂಜೇಶ್ವರ ಮಠದ ಶ್ರೀ ಮಹೇಶ್ವರ ಶಿವಾಚಾರ್ಯರು, ಹೇರೂರು ಗುಬ್ಬಿ ನಂಜುಂಡೇಶ್ವರ ಮಠದ ಶ್ರೀ ನಂಜುಂಡೇಶ್ವರ ಶಿವಾಚಾರ್ಯರು ಕಾರ್ಯಕ್ರಮ ನೆರವೇರಿಸುವರು.

ಸಂಜೆ 5ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ, ಎರಡೆತ್ತಿನಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಶಾಸಕ ಪ್ರಸಾದ ಅಬ್ಬಯ್ಯ, ಮೇಯರ್ ರಾಮಣ್ಣ ಬಡಿಗೇರ ಇತರರು ಪಾಲ್ಗೊಳ್ಳುವರು.

ಶಿರಸಂಗಿಯ ಶ್ರೀ ಸಂಗಮೇಶ್ವರ ದೇವರು ಹಿರೇಮಠ ಅವರು ಶ್ರಾವಣ ಪ್ರವಚನ ನೀಡುವರು.

ಸೆ. 10ರಂದು ಬೆಳಗ್ಗೆ 10ಕ್ಕೆ ಶ್ರೀ ಚನ್ನವಿರ ಸ್ವಾಮೀಜಿ ಪುಣ್ಯಸ್ಮರಣೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net