ಜೆಡಿಎಸ್ ಹೊಂದಾಣಿಕೆಯ ತಂತ್ರ ಬ್ರಹ್ಮನಿಗೂ ಗೊತ್ತಿಲ್ಲ !

28 CRP 02 (1)
Published on


ಹಾಸನ (ಚನ್ನರಾಯಪಟ್ಟಣ): ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಸಿದ್ದರಾಮಯ್ಯನವರ ಆರೋಪ ಶುದ್ಧ ಸುಳ್ಳು. ಜೆಡಿಎಸ್ ಯಾರ ಜತೆಗೆ ಹೊಂದಾಣಿಕಗೆ ಮಾಡಿಕೊಳ್ಳುತ್ತಾರೆಂಬುದು ಬ್ರಹ್ಮನಿಗೂ ಗೊತ್ತಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ವ್ಯಂಗ್ಯವಾಡಿದರು.

ತಾಲೂಕಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗ್ರಾಮ ಸ್ವರಾಜ್ಯ ಕಾರ್ಯಕ್ರಮಕ್ಕೆ ಬಂದಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ಸುಭದ್ರವಾಗಿದೆ. ಬಿ.ಎಸ್. ಯಡಿಯೂರಪ್ಪ ಅಧಿಕಾರವಧಿ ಪೂರ್ಣಗೊಳಿಸಲಿದ್ದು, 2023ರ ಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ. ಕಾಂಗ್ರೆಸ್‌ಗೆ ಮುಂದಿನ 10 ವರ್ಷ ವಿರೋಧ ಪಕ್ಷದ ಸ್ಥಾನ ಖಚಿತ ಎಂದರು.

ಸಿಎಂ ಬದಲಾವಣೆ ಎನ್ನುವುದು ವಿರೋಧ ಪಕ್ಷದವರು ಹಬ್ಬಿಸುತ್ತಿರುವ ವದಂತಿ. ಉಹಾಪೋಹಗಳಿಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಗ್ರಾಮ ಸ್ವರಾಜ್ಯ ಸಮಾವೇಶದ ಮೂಲಕ ಮೋದಿ ಅವರ ಮಹತ್ವದ ಯೋಜನೆಗಳನ್ನು ಜನತೆಗೆ ತಿಳಿಸುವ ನಿಟ್ಟಿನಲ್ಲಿ 6 ತಂಡಗಳನ್ನು ರಚನೆ ಮಾಡಲಾಗಿದೆ. ಇಂದಿನಿಂದ ಎಲ್ಲ ತಂಡಗಳು ರಾಜ್ಯದಲ್ಲಿ ಪ್ರವಾಸ ಕೈಗೊಂಡು ಗ್ರಾಮ ಪಂಚಾಯಿತ್ತಿಗಳಲ್ಲಿಯೂ ಬಿಜೆಪಿ ಬಾವುಟ ಹಾರಿಸುವ ಸಂಕಲ್ಪ ಮಾಡಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net