ಕೊಂಬಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಎತ್ತಿಗೆ ಯಶಸ್ವಿ ಚಿಕಿತ್ಸೆ

01 CRP 01 (1)
Published on


ಚನ್ನರಾಯಪಟ್ಟಣ: ಕೊಂಬಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಎತ್ತಿಗೆ ತಾಲೂಕಿನ ಅಣತಿ ಪಶು ಚಿಕಿತ್ಸಾಲಯದ ಡಾ.ಎಸ್.ಪಿ.ಮಂಜುನಾಥ್ ಹಾಗೂ ಸಾತೇನಹಳ್ಳಿ ಪಶು ಚಿಕಿತ್ಸಾಲಯದ ಡಾ.ಜೆ.ಕೆ.ಪ್ರಮೋದ್ ನಡೆಸಿದ ಚಿಕಿತ್ಸೆ ಯಶಸ್ವಿಯಾಗಿದೆ.


ಅರಸೀಕೆರೆ ತಾಲೂಕು ದೊಡ್ಡಎರಗನಾಳು ಗ್ರಾಮದ ರೈತ ಮಂಜುನಾಥ್ ಅವರ ಸುಮಾರು ನಾಲ್ಕೈದು ವರ್ಷ ವಯಸ್ಸಿನ ಎತ್ತು ಕಳೆದ ಎರಡು ತಿಂಗಳಿಂದ ಕೊಂಬಿನ ಕ್ಯಾನ್ಸರ್‌ನಿಂದ ಬಳಲುತ್ತಿತ್ತು. ನೋವಿನ ಪರಿಣಾಮ ಮೇವು ಹಾಗೂ ನೀರನ್ನು ಬಿಟ್ಟು ಮೇಲೇಳಲಾಗದ ಸ್ಥಿತಿಯಲ್ಲಿ ಕೊಟ್ಟಿಗೆಯಲ್ಲಿಯೇ ಮಲಗಿತ್ತು.


ವಿಷಯ ತಿಳಿದು ಸ್ಥಳಕ್ಕಾಗಮಿಸಿ ಪರೀಕ್ಷೆ ನಡೆಸಿದ ವೈದ್ಯರು ಕೊಂಬಿನ ಬುಡದಲ್ಲಿ ಕೀವು ತುಂಬಿಕೊಂಡು ಒಂದು ನಿಮಿಷವೂ ಸಹಜವಾಗಿ ನಿಲ್ಲದ ಸ್ಥಿತಿಯಲ್ಲಿರುವುದನ್ನು ಗಮನಿಸಿ ಸತತ 2 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಕೊಂಬನ್ನು ತೆಗೆದುಹಾಕಿದರು. ಸದ್ಯ ಎತ್ತು ಚೇತರಿಕೆ ಕಂಡಿದ್ದು ಮೇವು ಹಾಗೂ ನೀರು ಸೇವಿಸುವುದರ ಜತೆಗೆ ಹೆಜ್ಜೆ ಇಡುವಂತಾಗಿದೆ.


ಡಾ.ಎಸ್.ಪಿ.ಮಂಜುನಾಥ್ ಮಾತನಾಡಿ, ಎತ್ತುಗಳಲ್ಲಿ ಕೊಂಬಿನ ಕ್ಯಾನ್ಸರ್ ಕಾಣಿಸಿಕೊಳ್ಳುವುದು ಸಹಜವಾಗಿದ್ದು, ಇದಕ್ಕೆ ಅನುವಂಶೀಯತೆಯೂ ಒಂದು ಕಾರಣವಾಗಿದೆ. ಸೂರ್ಯನ ಪ್ರಖರವಾದ ಕಿರಣಗಳ ಪರಿಣಾಮ, ರಾಸಾಯನಿಕಯುಕ್ತ ಬಣ್ಣಗಳನ್ನು ಕೊಂಬಿಗೆ ಲೇಪನ ಮಾಡುವುದು ಹಾಗೂ ಕೊಂಬಿನ ಬುಡಕ್ಕೆ ಬಿಗಿಯಾಗಿ ಬಟ್ಟೆ ಅಥವಾ ಹಗ್ಗ ಕಟ್ಟುವುದರಿಂದಲೂ ಕೊಂಬಿನ ಕ್ಯಾನ್ಸರ್ ಕಾಣಸಿಕೊಳ್ಳುವ ಸಾಧ್ಯತೆ ಇದೆ. ರೈತರು ಇಂತಹ ವಿಚಾರಗಳ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದು ಎಚ್ಚರಿಸಿದರು.
ಪಶುವೈದ್ಯರ ಚಿಕಿತ್ಸೆ ಬಗ್ಗೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದರು.

ಬೀಡು: ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣ ವಿರೋಧಿಸಿ ಸೆಸ್ಕ್ ನೌಕರರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.


ಸೋಮವಾರ ಇಲ್ಲಿನ ಸೆಸ್ಕ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ನೌಕರರು, 2003ರ ನೇಮಕಾತಿ ಕಾಯ್ದೆಗೆ ತಿದ್ದುಪಡಿ ತಂದು ಜಾರಿಗೊಳಿಸಲು ಯೋಜಿಸಿರುವ ಪ್ರಸ್ತಾವಿತ 2020ರ ಕಾಯ್ದೆಗೆ ನಮ್ಮ ವಿರೋಧವಿದ್ದು , ಕೇಂದ್ರ ಸರ್ಕಾರವು ವಿದ್ಯುತ್ ಕಂಪನಿಗಳನ್ನು ಖಾಸಗಿ ಒಡೆತನಕ್ಕೆ ಕೊಡಲು ಹೊರಟಿದೆ ಎಂದು ಆರೋಪಿಸಿದರು.
ಹೊರಗುತ್ತಿಗೆ ಪದ್ಧತಿಯನ್ನು ಜಾರಿಗೆ ತರುವುದು ಕಾರ್ಮಿಕ ವಿರೋಧಿ ನೀತಿಯಾಗಿದ್ದು ರಾಜ್ಯ ವಿದ್ಯುತ್ ನಿಗಮಗಳ ನೌಕರರ ಹಾಗೂ ಕಾರ್ಮಿಕ ಒಕ್ಕೂಟ ಅಸಮ್ಮತಿ ಸೂಚಿಸಿವೆ ಎಂದು ಹೇಳಿದರು.


ತಿದ್ದುಪಡಿ ಕಾಯ್ದೆಯಿಂದ ಸಾರ್ವಜನಿಕರಿಗೆ ಹೊರೆಯಾಗಲಿದ್ದು, ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಹಾಗಾಗಿ ಖಾಸಗೀಕರಣ ನೀತಿಯನ್ನು ಕೈ ಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.


ಸೆಸ್ಕ್ ಅಧಿಕಾರಿಗಳು, ನೌಕರರಾದ ರಾಜಣ್ಣ, ಮಂಜುನಾಥ್, ಬಾಬು, ಸೋಮಶೇಖರ್ ಮತ್ತಿತರರು ಇದ್ದರು.

ಹಳೇಬೀಡಿನ ಸೆಸ್ಕ್ ಕಚೇರಿ ಆವರಣದಲ್ಲಿ ನೌಕರರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ಚಿಜಟಿ01ಎಚ್ಬಿಡಿ1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net